ಬೆಂಗಳೂರು: ಇತ್ತಿಚಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಅದ್ರಲ್ಲೂ ಪಶ್ಚಿಮ ವಿಭಾಗದ ಠಾಣಾ ವ್ಯಾಪ್ತಿಯಲ್ಲಂತೂ ಮೊಬೈಲ್ ರಾಬರ್ಸ್ ಮೀತಿ ಮೀರಿದ್ದಾರೆ. ಕ್ಷಣ ಮಾತ್ರದಲ್ಲಿ ಮೊಬೈಲ್ ಎಗರಿಸೋದ್ರಲ್ಲಿ ಇವ್ರು ನಿಸ್ಸೀಮರಾಗಿದ್ದಾರೆ. ಪಲ್ಸರ್ ಬೈಕಲ್ಲಿ ಬಂದು ಕ್ಷಣಮಾತ್ರದಲ್ಲಿ ಮೊಬೈಲ್ ಹೊತ್ತೊಯ್ಯೋ ಇವ್ರು, ಫುಲ್ ಆಕ್ಟೀವ್ ಆಗಿರೋದು ಮಾಗಡಿರಸ್ತೆ, ಕೆಂಗೇರಿ, ಬಸವೇಶ್ವರನಗರ,ಗೋವಿಂದರಾಜಾಜಿನಗರ ಭಾಗದಲ್ಲ. ಈ ಭಾಗದಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ರಾಬರಿ ಹೆಚ್ಚಾಗ್ತಾ ಇದ್ದು, ಒಂದೇ ದಿನ 4 ಮೊಬೈಲ್ ಗಳನ್ನ ಸುಲಿಗೆಕೋರರು ಹೊತ್ತೊಯ್ದಿದ್ದಾರೆ. ಮೊಬೈಲ್ ಹಿಡಿದು ಹೋಗ್ತಿದ್ದ ಪಾದಚಾರಿಯೊಬ್ಬರನ್ನು ಟಾರ್ಗೇಟ್ ಮಾಡಿ ಮೊಬೈಲ್ ಸ್ನ್ಯಾಚ್ ಮಾಡಿ ಪರಾರಿಯಾಗಿದ್ದಾರೆ. ಇನ್ನೂ ಈ ದೃಶ್ಯ ಸಿಸಿ ಟಿವಿಯಲ್ಲೂ ಕೂಡ ಸೆರೆಯಾಗಿದೆ.
PublicNext
10/08/2022 02:31 pm