ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಬಳ್ಳಾಪುರ ಪ್ರಯಾಣಿಕರೊಂದಿಗೆ ಆಂಧ್ರ ಬಸ್‌ ಚಾಲಕ, ನಿರ್ವಾಹಕನ ಕಿರಿಕ್

ದೊಡ್ಡಬಳ್ಳಾಪುರ: ಆಂಧ್ರ ಬಸ್ ಚಾಲಕ ಮತ್ತು ನಿರ್ವಾಹಕನೊಬ್ಬ ಪ್ರಯಾಣಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪ್ರಯಾಣಿಕರೊಂದಿಗೆ ಉದ್ದಟತನ ತೋರಿದ್ದಾರೆ. ಕುಡಿಯುತ್ತಾರೆ, ಕದಿಯುತ್ತಾರೆಂಬ ಸುಳ್ಳು ನೆಪ ಹೇಳಿ ದೊಡ್ಡಬಳ್ಳಾಪುರದವರಿಗೆ ಬಸ್‌ನಲ್ಲಿ ಅವಕಾಶ ಕೊಡದೆ ಇದ್ದಿದ್ದಕ್ಕೆ ಆಂಧ್ರ ಬಸ್ ತಡೆದ ಪ್ರಯಾಣಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ಆಂಧ್ರ ಗಡಿಭಾಗದಲ್ಲಿನ ಪ್ರಮುಖ ನಗರಗಳು. ದಿನನಿತ್ಯ ಸಾವಿರಾರು ಜನರು ಬೆಂಗಳೂರು ನಗರಕ್ಕೆ ಬಂದು ಹೋಗುತ್ತಾರೆ. ಪ್ರಯಾಣಕ್ಕೆ ಆಂಧ್ರ ಮತ್ತು ಕರ್ನಾಟಕ ಸಾರಿಗೆ ಎರಡನ್ನೂ ಅವಲಂಬಿಸಿದ್ದಾರೆ. ರಾತ್ರಿ 10 ಗಂಟೆಯ ನಂತರ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಕರ್ನಾಟಕ ಸಾರಿಗೆ ಸೌಲಭ್ಯ ಇರುವುದಿಲ್ಲ. ಇದರಿಂದ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ ಮತ್ತು ಹಿಂದೂಪುರಕ್ಕೆ ಸಂಚಾರಿಸುವ ಆಂಧ್ರ ಬಸ್‌ಗಳನ್ನೇ ದೊಡ್ಡಬಳ್ಳಾಪುರ ಜನರು ಅವಲಂಬಿಸಿದ್ದಾರೆ.

ಕಳೆದ ಶನಿವಾರ ರಾತ್ರಿ 12 ಗಂಟೆಯ ಸಮಯದಲ್ಲಿ ಆಂಧ್ರ ಬಸ್‌ನಲ್ಲಿ ಪ್ರಯಾಣಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪ್ರಯಾಣಿಕರು ಮತ್ತು ನಿರ್ವಾಹಕನ ನಡುವೆ ಜಗಳ ನಡೆದಿದೆ. ಎರಡನೇ ಪಾಳಿ ಕೆಲಸ ಮುಗಿಸಿದ ದೊಡ್ಡಬಳ್ಳಾಪುರ ಉದ್ಯೋಗಿಗಳು ಆಂಧ್ರ ಸಾರಿಗೆ ಬಸ್ ಹತ್ತಲು ಹೋದಾಗ ನಿರ್ವಾಹಕ ಅವಕಾಶ ನಿಡೋದಿಲ್ಲ, ಕುಡಿದು ಪ್ರಯಾಣಿಸುತ್ತಿರಿ ಮತ್ತು ಕಳ್ಳತನ ಮಾಡ್ತೀರಿ ಎಂಬ ಸುಳ್ಳು ನೆಪ ಹೇಳಿ ದೊಡ್ಡಬಳ್ಳಾಪುರ ಪ್ರಯಾಣಿಕರನ್ನ ನಿಂದಿಸುತ್ತಾರೆಂಬ ಆರೋಪ ಪ್ರಯಾಣಿಕರದ್ದು. ಇದೇ ಕಾರಣಕ್ಕೆ ಶನಿವಾರ ರಾತ್ರಿ 12 ಗಂಟೆಯಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕನ ನಡುವೆ ಜಗಳ ನಡೆದಿದೆ. ನಿರ್ವಾಹಕನ ನಿಂದನಾತ್ಮಕ ಮಾತುಗಳಿಂದ ಕೆರಳಿದ ದೊಡ್ಡಬಳ್ಳಾಪುರ ಪ್ರಯಾಣಿಕರು ಡಿ ಕ್ರಾಸ್‌ನಲ್ಲಿ ಬಸ್ ತಡೆದು ಚಾಲಕ ಮತ್ತು ನಿರ್ವಾಹಕನನ್ನ ತರಾಟೆಗೆ ತೆಗೆದುಕೊಂಡರು. ಇದೇ ಸಮಯಕ್ಕೆ ಬಂದ ದೊಡ್ಡಬಳ್ಳಾಪುರ ನಗರ ಪೊಲೀಸರು ಸಹ ಆಂಧ್ರ ಬಸ್ ನಿರ್ವಾಹಕ ಮತ್ತು ಚಾಲಕನ ಪರವಾಗಿ ಮಾತನಾಡಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರೇ ಸಾರಿಗೆ ಸಂಸ್ಥೆಯ ನಿಜವಾದ ಮಾಲೀಕರು. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವ ತಿಳಿವಳಿಕೆಯನ್ನ ನಿರ್ವಾಹಕ ಮತ್ತು ಚಾಲಕರಿಗೆ ಕೊಡಬೇಕಿದೆ.

Edited By : Nagesh Gaonkar
PublicNext

PublicNext

10/08/2022 11:50 am

Cinque Terre

28.93 K

Cinque Terre

1

ಸಂಬಂಧಿತ ಸುದ್ದಿ