ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೋಕಿ ಜೀವನಕ್ಕೆ ಬೈಕ್ ಕಳ್ಳತನ : ಐನಾತಿ ಕಳ್ಳರು ಅಂದರ್

ಬೆಂಗಳೂರು: ಒಂದು ಕಡೆ ಸಾಲು ಸಾಲು ಕಾರುಗಳು ಮತ್ತೊಂದು ಕಡೆ ಸಾಲು ಸಾಲು ಬೈಕ್ ಗಳು. ಈ ಎಲ್ಲಾ ವಾಹನಗಳು ಯಾವುದೋ ರಿಸೆಲ್ ಶಾಪ್ ಬಳಿ ನಿಲ್ಲಿಸಿರೊ ವಾಹನಗಳಲ್ಲ. ಬದಲಾಗಿ ಇವೆಲ್ಲವೂ ಕದ್ದ ವಾಹನಗಳು.

ನಗರದಲ್ಲಿ ಸದ್ದಿಲ್ಲದೇ ಆ್ಯಕ್ಟೀವ್ ಆದ ವಾಹನ ಕಳುವು ಮಾಡುವ ಗ್ಯಾಂಗ್ ಒಂದನ್ನು ಕೇಂದ್ರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ಧಾರೆ.

ಈ ಫೋಟೊದಲ್ಲಿ ಕಾಣುತ್ತಿರುವ ಈತನ ಹೆಸರು ರಂಜಿತ್.ನಿಯತ್ತಾಗಿ ದುಡಿದಿದ್ರೆ ಒಪ್ಪತ್ತಿನ ಊಟಕ್ಕೂ ಕಡಿಮೆ ಆಗುತ್ತಿರಲಿಲ್ಲ. ಆದ್ರೆ ಮೈ ಬಗ್ಗಿಸಿ ದುಡಿಯದೇ ತನ್ನ ಗೆಳೆಯನ ಜೊತೆಗೂಡಿ ನಗರದಲ್ಲಿ ಕಂಡ ಕಂಡ ಕಡೆ ಬೈಕ್ ಎಗರಿಸೊ ಕಯಾಲಿ ಶುರು ಮಾಡಿದ್ರು. ಅದರಂತೆ ಜಾಲಹಳ್ಳಿ, ತಿಲಕ್ ನಗರ, ಕೆಂಗೇರಿ, ಸಂಜಯ್ ನಗರವಷ್ಟೇ ಅಲ್ಲದೇ ಮಂಡ್ಯದಲ್ಲೂ ತಮ್ಮ ಕೈ ಚಳಕ ತೋರಿದ್ದಾರೆ.

ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಎಗರಿಸೋ ಈ ಖದೀಮರನ್ನು ಭೇಟೆಯಾಡಿದ ಶೇಷಾದ್ರಿಪುರಂ ಪೊಲೀಸರು ಆರೋಪಿಗಳಿಂದ ಬರೊಬ್ಬರಿ 6 ಲಕ್ಷ ಮೌಲ್ಯದ ಬರೊಬ್ಬರಿ 14 ಬೈಕ್, 10, ಮೊಬೈಲ್ ಫೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.

ಇನ್ನು ಸುನೀಲ ಎನ್ನುವ ಮತ್ತೊಬ್ಬ ಆಸಾಮಿ ವಯಸ್ಸಾದ ಕಾಲದಲ್ಲಿ ಸಣ್ಣ ಪುಟ್ಟ ಕೆಲಸ ಮಾಡೊದು ಬಿಟ್ಟು ವಂಚನೆಗೆ ಇಳಿದಿದ್ದ.ಅದರಂತೆ ಟ್ರಾವೆಲ್ಸ್ ಮಾಲೀಕರೋರ್ವರ ಪರಿಚಯ ಮಾಡಿಕೊಂಡ ಈತ ಉದ್ಯಮ ಮಾಡೊದಾಗಿ ನಂಬಿಸಿದ್ನಂತೆ.ಅದರಂತೆ ಕೊರೊನಾ ಕಾಲದ ಸಂಕಷ್ಟದಲ್ಲಿದ್ದ ಮಾಲೀಕನಿಂದ ಕಾರ್ ಗಳನ್ನು ಬಾಡಿಗೆಗೆ ಪಡೆದು ತನ್ನದೇ ಉದ್ಯಮದಿಂದ ಹಣ ಕಟ್ಟೊದಾಗಿ ಹೇಳಿ ಆರಂಭದಲ್ಲಿ ಒಂದಿಷ್ಟು ಹಣ ಕೊಟ್ಟು ನಂಬಿಕೆ ಗಳಿಸಿದ ಈತ, ನಂತರ ಟ್ರಾವೆಲ್ಸ್ ಮಾಲೀಕನ ಗಮನಕ್ಕೆ ಬಾರದಂತೆ ಬೇರೊಬ್ಬರಿಗೆ ಕಾರ್ ಮಾರಿ ವಂಚನೆ ಮಾಡಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 45 ಲಕ್ಷ ಮೌಲ್ಯದ ಏಳು ಕಾರ್ ಗಳ ವಶಕ್ಕೆ ಪಡೆದಿದ್ದಾರೆ.

ಇನ್ನು ಇದೇ ರೀತಿ ನಗರದ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್, ಎಸ್ ಜೆ ಪಾರ್ಕ್ ಹಾಗೂ ವೈಯಾಲಿಕಾವಲ್ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳ ಸಂಬಂಧ ಸಹ ಕಾರ್ಯಾಚರಣೆ ನಡೆಸಿದ ಪೊಲೀಸರು ಮೋಜು ಮಸ್ತಿಗಾಗಿ ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದವರನ್ನು ಖೆಡ್ಡಾಕೆ ಕೆಡವಿದ್ದಾರೆ.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

10/08/2022 09:54 am

Cinque Terre

36.5 K

Cinque Terre

0

ಸಂಬಂಧಿತ ಸುದ್ದಿ