ಬೆಂಗಳೂರು: ಬೆಂಗಳೂರು ಇಂಡಿಯಾದಲ್ಲೆ ಸುರಕ್ಷಿತ ನಗರ ಎಂದು ಹೆಸರು ಮಾಡಿದೆ. ಆದ್ರೆ ಇಲ್ಲೊಬ್ರು ಮಹಿಳೆ 'worst country, we r not safe in my house' ಎಂದು ಟ್ವೀಟ್ ಮಾಡಿದ್ದಾರೆ.
ಪೊಲೀಸರು ಮನೆಗೆ ಬಂದು ಕಿರುಕುಳ ನೀಡಿದ್ದಾರೆಂದು ಆರೋಪಿಸಿ 'ವರ್ಸ್ಟ್ ಕಂಟ್ರಿ' ಎಂದು ಟ್ವೀಟ್ ಮಾಡಿದ ಘಟನೆ ವರದಿಯಾಗಿದೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಕ್ಕ ಪಕ್ಕದ ನಿವಾಸಿಗಳು ನೀಲ್ಮಾ ದಿಲೀಪನ್ ಎಂಬಾಕೆಯ ಮನೆಯಲ್ಲಿ ನಾಯ್ಸ್ ಪೊಲ್ಯೂಷನ್ ಆಗ್ತಿದೆ ಎಂದು 112ಗೆದೂರು ನೀಡಿದ್ರು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಹಾಗು ಮನೆಯವರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಲಸೂರು ಪೊಲೀಸ್ ಮನೆಯಲ್ಲಿದ್ದ ವ್ಯಕ್ತಿಯ ಕುತ್ತಿಗೆ ಪಟ್ಟಿ ಹಿಡಿದು ಜಗಳವಾಡಿದ್ದ. ಈ ಜಟಾಪಟಿ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಇನ್ನು ನಾವು ಯಾವುದೇ ನಾಯ್ಸ್ಚ ಪೊಲ್ಯೂಷನ್ ಮಾಡಿಲ್ಲ. ಮನೆಯೊಳಗೆ ಟಿವಿ ಹಾಕಿದ್ದೇವಷ್ಟೆ ಯಾರೋ ಕರೆ ಮಾಡಿ ಹೇಳಿದ ಕೂಡಲೆ ಸ್ಥಳಕ್ಕೆ ಬಂದು ಅನುಚಿತವಾಗಿ ವರ್ತನೆ ಮಾಡ್ತಿದ್ದಾರೆಂದು ಮಹಿಳೆ ಟ್ವೀಟ್ ಮಾಡಿದ್ದಾಳೆ. ಅಷ್ಟಲ್ಲದೆ we r not safe in my house ಎಂದು ಬರೆದಿದ್ದಲ್ಲದೇ worst country ಎಂದು ಟ್ವೀಟ್ ಮಾಡಿದ್ದಾಳೆ. ಇನ್ನು ಆಗಿರುವ ತಪ್ಪುಗಳನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಮೂಲಕ ಹೋರಾಟ ಮಾಡಬೇಕು ಅದನ್ನ ಬಿಟ್ಟು ದೇಶದ ಬಗ್ಗೆ ಮಾತನಾಡಿದ ಮಹಿಳೆ ಮೇಲೆ ಆಕ್ರೋಶ ವ್ಯಕ್ತವಾಗಿದೆ.
PublicNext
09/08/2022 12:45 pm