ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವರಿಗೆ ಕನ್ನಡ ಕಲಿಸುತ್ತಿದ್ದ ಟ್ರೈನರ್ ನಿಂದಲೇ ಸಚಿವರ ಹೆಸರಲ್ಲಿ ವಂಚನೆ!

ಬೆಂಗಳೂರು:ಪಶುಸಂಗೋಪನೆ ಇಲಾಖೆ ಸಚಿವರ ನಕಲಿ ಸಹಿ ಬಳಸಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಕಿಡಿಗೇಡಿಗಳನ್ನ ಸಂಜಯ ನಗರ ಪೊಲೀಸ್ರು ಬಂಧಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಸಚಿವರಿಗೆ ಕನ್ನಡ ಕಲಿಸುತ್ತಿದ್ದ ಆರೋಪಿ ಜ್ಞಾನದೇವ್ ಜಾಧವ್ ಈ ಕೃತ್ಯವೆಸಗಿದ್ದು, ಆರೋಪಿಯನ್ನ ಸಚಿವರು 2019 ರಲ್ಲಿ ತಮ್ಮ ಕನ್ನಡ ಶಿಕ್ಷಕರಾಗಿ ನೇಮಿಸಿಕೊಂಡಿದ್ರು. ಇದ್ರ ಜೊತೆಗೆ ಆರೋಪಿ ಜಾಧವ್, ಸಚಿವರ ಕಚೇರಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದ. ಸಚಿವರು ನನಗೆ ಆಪ್ತರು ,ನಾನು ಕನ್ನಡ ಶಿಕ್ಷಕನಾಗಿದ್ದೆನೆ ಎಂದು ಹೇಳಿಕೊಂಡು,ಪಶುಸಂಗೋಪನೆ ಇಲಾಖೆಯ FDA, SDA ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಿದ್ದ.

ಈ ಹುದ್ದೆ ಗೆ ಅರ್ಜಿ ಸಲ್ಲಿಸಿದ 63 ಮಂದಿಯನ್ನ ಆಯ್ಕೆ ಮಾಡಿ ಪ್ರತಿ ಅಭ್ಯರ್ಥಿಗಳಿಂದ 2 ದಿಂದ 4 ಲಕ್ಷ ದವರೆಗೂ ಸುಮಾರು 25 ಲಕ್ಷ ಹಣ ಪಡೆದಿದ್ದ. ಇದಕ್ಕಾಗಿ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಆದೇಶ ಮತ್ತು ಹೆಸರನ್ನ ನಕಲಿ ಮಾಡಿ, ದಾಖಲೆ ಸೃಷ್ಟಿ ಮಾಡಿ ನೇಮಕಾತಿ ಪ್ರಕ್ರಿಯೆಯನ್ನ ಥೇಟ್ ಸರ್ಕಾರಿ ನೇಮಕಾತಿಯಂತೆ ನಡೆಸಿದ್ದ ಈ

ಆರೋಪಿ ಜುಲೈ 30 ರ ಒಳಗೆ ಆಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ.

ಕೆಲ ಅಭ್ಯರ್ಥಿಗಳು ಇಲಾಖೆಯನ್ನ ಸಂಪರ್ಕಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Edited By :
PublicNext

PublicNext

05/08/2022 08:15 pm

Cinque Terre

18.8 K

Cinque Terre

1

ಸಂಬಂಧಿತ ಸುದ್ದಿ