ಬೆಂಗಳೂರ: ಜೈಲಿನಿಂದ ರಿಲೀಸ್ ಆದ್ಮೇ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಸಿಸಿಬಿ ಪೊಲೀಸ್ರ ಮುಂದೆ ಹಾಜರಾಗಿದ್ದಾನೆ.ಜೈಲಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದು.ನಾಗನಿಗೆ ಸಿಸಿಬಿಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ರು.
ಈ ಹಿನ್ನೆಲೆ ಖುದ್ದು ನಾಗ ಸಿಸಿಬಿ ಹಾಜರಾಗಿದ್ದಾನೆ. ನಾಗಜೊತೆಗೆ ಡಬಲ್ ಮೀಟರ್ ಮೋಹನ್ ಕೂಡ ಸಿಸಿಬಿ ಮುಂದೆ ಹಾಜರಾಗಿದ್ದಾನೆ. ಇನ್ನೂ ನಾಗನಿಗೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಸಿಸಿಬಿ ವಾರ್ನ್ ಮಾಡಿದ್ದು,ಇದಕ್ಕೆ ನಾಗ ಸರ್ ನಾನು ಜೈಲಿಗೆ ಹೋದಮೇಲೆ ಬಿಡುಗಡೆಯಾದ ಮೇಲೆ ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಮಾಧ್ಯಮದಲ್ಲಿ ಸುಖಾ ಸುಮ್ಮನೆ ನನ್ನ ಹೆಸ್ರು ಬರ್ತಿದೆ ಅಷ್ಟೇ ಎಂದಿದ್ದಾನೆ.
ಮುಂದೆ ಬಾಲಬಿಚ್ಚದಂತೆ ಸಿಸಿಬಿ ಪೊಲೀಸ್ರರು ನಾಗನಿಗೆ ವಾರ್ನ್ ಮಾಡಿದ್ದಾರೆ.
Kshetra Samachara
03/08/2022 12:19 pm