ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಿಗಣೆ ಔಷಧಿ ತಂದ ಆಪತ್ತು; ಆರು ವರ್ಷದ ಬಾಲಕಿ ದುರ್ಮರಣ

ಬೆಂಗಳೂರು: ನಿಮ್ಮ ಮನೆಯಲ್ಲಿ ಜಿರಳೆ, ತಿಗಣೆ ಕಾಟವೇ ಎನ್ನುವ ಬೋರ್ಡ್ ನೋಡಿ ಮನೆಗೆ ಕೀಟನಾಶಕ ಸಿಂಪಡಿಸೋ ಮುನ್ನ ಸ್ವಲ್ಪ‌ ಜಾಗ್ರತೆ ಇರಲಿ. ಸ್ವಲ್ಪ ಏಮಾರಿದ್ರು ಪ್ರಾಣಕ್ಕೆ ಕುತ್ತು ಬರೋದು ಪಕ್ಕಾ.

ತನ್ನದಲ್ಲದ ತಪ್ಪಿಗೆ ಆರು ವರ್ಷದ ಕಂದ ಹಸುನೀಗಿದೆ. ಅಪ್ಪ ಅಮ್ಮ ಮತ್ತು ಮನೆ ಮಾಲೀಕನ ಎಡವಟ್ಟಿಗೆ ಆರು ವರ್ಷದ ಬಾಲಕಿ ಬಲಿಯಾಗಿದ್ರೆ ಅಪ್ಪ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ತಿಗಣೆ ಜಿರಳೆ ಹೆಚ್ಚಾಗಿದ್ರಿಂದ ಮನೆ ಮಾಲೀಕ ಔಷಧಿ ಸಿಂಪಡಿಸೋದಾಗಿ ಹೇಳಿದ್ರು. ಇದಕ್ಕೆ ಒಂದು ವಾರ ಮನೆಗೆ ಬರಬೇಡಿ ಅಂತ ಹೇಳಿದ್ರು. ಇದಕ್ಕೆ ಒಪ್ಪಿದ ಬಾಡಿಗೆದಾರರಾದ ವಿನೋದ್ ಮತ್ತು ನಿಶಾ ಹಾಗೂ ಆರು ವರ್ಷದ ಅಹನಳಾ ಜೊತೆ ಸಂಬಂಧಿಕರ ಮನೆಗೆ ಹೋಗಿದ್ರು. ತಿಗಣೆ ಔಷಧದ ಅರಿವಿಲ್ಲದೆ ಇಂದು ಮುಂಜಾನೆ ಐದು ಗಂಟೆಗೆ ಮನೆಗೆ ಬಂದು ಮಲಗಿದ್ರು. ಅದ್ಯಾವ ಕೀಟನಾಶಕ ಸಿಂಪಡಿಸಿದ್ರೊ ಗೊತ್ತಿಲ್ಲ, ಮನೆಗೆ ಬಂದು ಮಲಗುತ್ತಿದ್ದಂತೆ ಉಸಿರಾಟದ ಸಮಸ್ಯೆಯಾಗಿತ್ತು. ಇದನ್ನು ನಿರ್ಲಕ್ಷ್ಯ ಮಾಡಿದ ಮನೆಯವರು ಕಾಫಿ ಮಾಡಿ ಕುಡಿದು ರೆಸ್ಟ್ ಮಾಡಿದ್ರು.‌ ಆದ್ರೆ ಆರು ವರ್ಷದ ಬಾಲಕಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಸಾವನ್ನಪ್ಪಿದ್ದಾಳೆ. ಇನ್ನೂ ಪೋಷಕರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ..

Edited By : Vijay Kumar
Kshetra Samachara

Kshetra Samachara

01/08/2022 11:47 pm

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ