ಬೆಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಓರ್ವ ಆಫ್ರಿಕನ್ ಪ್ರಜೆಯನ್ನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಫ್ರಿಕಾ ಮೂಲದ ಪ್ರಿನ್ಸ್ ಜಫೇಥ್ ಮಸೆಲ್ಲೆ 25 ವರ್ಷ ಎಂಬಾತನನ್ನು ಬಂಧಿತ ಆರೋಪಿ. ಈತ ಸೋಲದೇವನಹಳ್ಳಿ ಗ್ರಾಮದ ಕೋಕೋನೆಟ್ ಗಾರ್ಡನ್‌ನಲ್ಲಿರುವ ಮಂಗಳಾ ಎಂಬುವರ ಬಳಿ ಬಾಡಿಗೆ ಮನೆ ಪಡೆದು ವಾಸವಿದ್ದ. ಕಾಲೇಜು ವಿದ್ಯಾರ್ಥಿಗಳಿಗೆ, ಮತ್ತು ಗಿರಾಕಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 2.4 ಕೆಜಿಯಷ್ಟು ಗಾಂಜಾವನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಪ್ರಿನ್ಸ್ ಬೆಂಗಳೂರು ಖಾಸಗಿ ಕಾಲೇಜ್‌ವೊಂದಲ್ಲಿ ಬಿ.ಫಾರ್ಮ್ ವ್ಯಾಸಂಗ ಮಾಡ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಪೊಲೀಸರು ಜೈಲಿಗಟ್ಟಿದ್ದಾರೆ.
PublicNext
30/07/2022 03:38 pm