ಯಲಹಂಕ:ಸರ್ಕಾರಿ ನೌಕರಿಯಲ್ಲಿದ್ದು, ಆದಾಯಕ್ಕಿಂತ ಶೇ 400 ಪಟ್ಟು ಅಧಿಕ ಆಸ್ತಿಗಳಿಸಿ ಸಿಕ್ಕಿಬಿದ್ದ RTO ಅಧಿಕಾರಿ & ಪತ್ನಿಗೆ ಬೆಂಗಳೂರು ಜಾರಿ ನಿರ್ದೇಶನಾಲಯ (ED) ಕೋರ್ಟ್ ಮೂರು ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶಿಸಿದೆ.
ಮಂಡ್ಯ ನಾಗಮಂಗಲ RTO ಜೆ.ವಿ.ರಾಮಯ್ಯ ,ಪತ್ನಿ ಲಲಿತಾ ರವರಿಗೆ ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ ಹತ್ತು ಸಾವಿರ ದಂಡ ವಿಧಿಸಲಾಗಿದೆ.
2009 ರಲ್ಲಿ ಕೋಲಾರದಲ್ಲಿ ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಲೋಕಾಯುಕ್ತ ದಾಳಿ ನಡೆಸಿ 1,24,23,929 ರೂಪಾಯಿ, ಆದಾಯಕ್ಕಿಂತ ಶೇಕಡ 415% ರಷ್ಟು ಹೆಚ್ಚು ಅಕ್ರಮ ಆಸ್ತಿ ಪತ್ತೆ ಮಾಡಿತ್ತು.
ಲೋಕಾಯುಕ್ತ ವರದಿ ಆಧಾರಿಸಿ ECIR ದಾಖಲಿಸಿ ED ತನಿಖೆ ನಡೆಸಿತ್ತು. PMLA 2002ರ ಕಲಂ 3ರ ಅಡಿ ಜೆ.ವಿ.ರಾಮಯ್ಯ & ಇವರ ಪತ್ನಿ ಶ್ರೀಮತಿ. ಎಂ ಲಲಿತಾರ ವಿರುದ್ದ ECIR ದಾಖಲಾಗಿ PMLA ಸೆಕ್ಷನ್ 5(2)ರ ಅಡಿ 70,27,857 ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) 2002ರ ಸೆಕ್ಷನ್ 4ರ ಅಡಿ ದೋಷಿಗಳೆಂದು ಘೋಷಿಸಿ ಇದೀಗ ಶಿಕ್ಷೆ ಪ್ರಕಟಿಸಲಾಗಿದೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
30/07/2022 08:59 am