ಬೆಂಗಳೂರು: ಎಣ್ಣೆ ನಶೆ ಕಡಿಮೆ ಆದ್ರೆ ಗಾಂಜಾ, ವೀಡ್ ಆಯಿಲ್ ನಶೆ ಏರಿಸೋಕೆ ಸಜ್ಜಾಗಿದ್ದ ಆರೋಪಿಯನ್ನ ಕಲಾಸಿಪಾಳ್ಯ ಪೊಲೀಸ್ರು ಮಾಲ್ ಸಮೇತ ದಸ್ತಗಿರಿ ಮಾಡಿದ್ದಾರೆ.
ಕಲಾಸಿಪಾಳ್ಯ ಬಾರ್ ಪಕ್ಕದಲ್ಲಿ ಎಣ್ಣೆ ಆಸಾಮಿಗಳನ್ನೆ ಟಾರ್ಗೇಟ್ ಮಾಡಿಕೊಂಡು ಗಾಂಜಾ ಮತ್ತು ವೀಡ್ ಆಯಿಲ್ ಮಾರಾಟ ಮಾಡ್ತಿದ್ದ ಬಾಗೇಪಲ್ಲಿ ಮೂಲದ ರಾಮಪ್ಪನನ್ನ ಕಲಾಸಿಪಾಳ್ಯ ಪೊಲೀಸ್ರು ಬಂಧಿಸಿದ್ದಾರೆ. ಬಂಧಿತನಿಂದ 55ಸಾವಿತ ಮೌಲ್ಯದ ಗಾಂಜ ಮತ್ತು ವೀಡ್ ಆಯೀಲ್ ಸೀಜ್ ಮಾಡಿದ್ದಾರೆ.ಇನ್ನೂ ಈ ರಾಮಪ್ಪ ಹೊರ ರಾಜ್ಯದಿಂದ ಗಾಂಜಾ ಮತ್ತು ವೀಡ್ ಆಯಿಲ್ ತರಿಸಿ ಲೋಕಲ್ ನಲ್ಲಿ ಕಡಿಮೆ ಬೆಲೆಗೆ ವೀಡ್ ಆಯಿಲ್ ಮಾರಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ.
Kshetra Samachara
26/07/2022 09:00 pm