ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಪೌಂಡ್ ನಿರ್ಮಿಸೊ ವಿಚಾರದ ಜಗಳ;5 ಸುತ್ತು ಗುಂಡು ಹಾರಿಸಿದ ಕೋಡಿಹಳ್ಳಿ ಜನಾರ್ಧನ್!

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮದಲ್ಲಿ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಭಯ ಹುಟ್ಟಿಸುವ ಘಟನೆ ನಡೆದಿದೆ. ಅಕ್ಕ-ಪಕ್ಕ ಕೃಷಿ ಜಮೀನು ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡುವ ಸಂಬಂಧ ಗಲಾಟೆಯಾಗಿದೆ. ಈ ವೇಳೆ ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಬಿಜೆಪಿ ಮುಖಂಡ

ಜನಾರ್ಧನ್ (ಜಾನಿ) ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಗುಂಡಿನ ಹೊಡೆತದಿಂದ ಪಾರಾಗಲು ಸುನೀಲ್ ಎಂಬಾತ ಕಬ್ಬಿಣದ ರಾಡ್ ಎಸೆದಿದ್ದಾನೆ. ಸುನಿಲ್ ಎಂಬಾತ ಹೊಸಕೋಟೆಯ ಪಿಎಲ್ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದರು. ಗಲಾಟೆ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ತಿರುಮಲಶಟ್ಟಿಹಳ್ಳಿ ಪೋಲೀಸರ ಭೇಟಿ ಪರಿಶೀಲನೆ ನಡೆಸಿದರು. ಇನ್ನೂ ಘಟನಾ ಸ್ಥಳಕ್ಜೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸಹ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

22/07/2022 08:27 pm

Cinque Terre

36.8 K

Cinque Terre

1

ಸಂಬಂಧಿತ ಸುದ್ದಿ