ಬೆಂಗಳೂರು: ಯುವಕ ಪ್ರೀತಿಗೆ ಚಿಕ್ಕಪ್ಪನೆ ವಿಲನ್ ದ್ವೇಷ ಸಾಧಿಸಿ ಯುವಕನನ್ನು ಹತ್ಯೆಗೈದಿದ್ದ ಚಿಕ್ಕಪ್ಪ ಸೇರಿ ಇಬ್ಬರನ್ನು ಬೈಯಪ್ಪನಹಳ್ಳಿ ಪೊಲೀಸರು ಸೆರೆಹಿಡಿದಿದ್ದಾರೆ.
ಜುಲೈ 15 ರಂದು ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪ್ರಜ್ವಲ್ ಎಂಬಾತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಗೇಂದ್ರ ಹಾಗೂ ರಂಗಸ್ವಾಮಿ ಎಂಬುವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಮೃತ ಪ್ರಜ್ವಲ್ ಗೆ ಆರೋಪಿ ನಾಗೇಂದ್ರ ಚಿಕ್ಕಪ್ಪನಾಗಿದ್ದಾನೆ. ಜುಲೈ 15ರ ರಾತ್ರಿ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹಲ್ಲೆಗೊಳಗಾಗಿ ಪ್ರಜ್ವಲ್ ಸಾವನ್ನಪ್ಪಿದ್ದ.
ಇನ್ನು ಹತ್ಯೆಗೆ ಕಾರಣವಾಗಿತ್ತು ಜಸ್ಟ್ ಒಂದು ಮೆಸೇಜ್
ಸಂಬಂಧಿಕರಲ್ಲಿ ಅಪ್ರಾಪ್ತ ಹುಡುಗಿಯನ್ನ ಪ್ರೀತಿಸುತ್ತಿದ್ದ ಪ್ರಜ್ವಲ್, ಆಕೆಗೆ ಲವ್ ಯೂ ಅಂತಾ ಮೆಸೇಜ್ ಕಳಿಸಿದ್ದ. ಇದಕ್ಕೆ ಪ್ರತಿಯಾಗಿ ಆಕೆಯಿಂದ ಲವ್ ಯೂ ಟೂ ಅಂತಾ ರಿಫ್ಲೈ ಬಂದಿತ್ತು. ಆದ್ರೆ ಪ್ರಜ್ವಲ್ ಇಷ್ಟವಿರದ ಯುವತಿಯ ಚಿಕ್ಕಪ್ಪ ನಾಗೇಂದ್ರ ಜುಲೈ15ರ ರಾತ್ರಿ ಮತ್ತೊಬ್ಬ ಯುವಕನ ಮೂಲಕ ಪ್ರಜ್ವಲ್ ನನ್ನ ಮಾತನಾಡೋದಕ್ಕೆ ಅಂತಾ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದ ಬಳಿ ಕರೆಸಿದ್ದಾನೆ. ಈ ವೇಳೆ ಜೊತೆಗಿದ್ದ ರಂಗಸ್ವಾಮಿ ಹಾಗೂ ನಾಗೇಂದ್ರ ಇಬ್ರೂ ಸೇರಿ ಪ್ರಜ್ವಲ್ ಹಾಗೂ ಆತನನ್ನ ಕರೆತಂದವ ಇಬ್ರಿಗೂ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಪ್ರಜ್ವಲ್ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಆರೋಪಿ ನಾಗೇಂದ್ರ ಈ ಹಿಂದೆಯೇ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
PublicNext
18/07/2022 05:35 pm