ಬೆಂಗಳೂರು: ಕತ್ತರಿಯಿಂದ ಕುತ್ತಿಗೆ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ. ೨೫ ವರ್ಷದ ಜಾವೇದ್ ಕೊಲೆಯಾದ ಯುವಕ. ಹುಡುಗಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಜಾವೇದ್ ಪ್ರೀತಿಸಿದ ಹುಡುಗಿ ಮದ್ವೆಯಾದ್ರೂ ಪದೇ ಪದೇ ಆಕೆಯ ಮನೆ ಹತ್ತಿರ ಹೋಗ್ತಿದ್ದ. ಇದ್ರಿಂದ ಕುಪಿತಗೊಂಡು ಪ್ರೇಯಸಿಯ ಪತಿಯೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಶಿವಾಜಿನಗರದ ಎಚ್ ಬಿ ಎಸ್ ಹಾಸ್ಪಿಟಲ್ ಬಳಿ ಘಟನೆ ನಡೆದಿದ್ದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುದೆ.
ಸಿಸಿಟಿವಿ ಬ್ಯುಸಿನೆಸ್ ಮಾಡ್ತಿದ್ದ ಜಾವೇದ್, ತಡರಾತ್ರಿ ಕೂಡ ಪ್ರೇಯಸಿ ಮನೆ ಬಳಿ ಹೋಗಿದ್ದ. ಆ ವೇಳೆ ಗಂಡ-ಹೆಂಡ್ತಿ ಇಬ್ಬರೂ ಸೇರಿ ಹತ್ಯೆಗೈದಿರೋ ಶಂಕೆ ಕೂಡ ವ್ಯಕ್ತವಾಗಿದ್ದು ಸದ್ಯ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ.
Kshetra Samachara
16/07/2022 04:00 pm