ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಲಕಿಯನ್ನು ಮದುವೆಯಾಗುವ ಉದ್ದೇಶಕ್ಕೆ ಆಧಾರ್ ಕಾರ್ಡ್ ತಿದ್ದಿ ಮಧಮಗನೊಬ್ಬ ಪೊಲೀಸರ ಅತಿಥಿಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಮೈನರ್ ವಧು ವರಿಸಲು ಹೋಗಿ ಆಧಾರ್ ಕಾರ್ಡ್ ಫೋರ್ಜರಿ ಮಾಡಿರುವ ಆರೋಪದ ಮೇಲೆ ಮನು ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ತೆರಳಿದ್ದ. ಆದರೆ ಬಾಲಕಿ ಹುಟ್ಟಿದ ವರ್ಷ 2005 ಇರುವುದನ್ನು 2000 ನೇ ಇಸವಿಗೆ ಬದಲಾಯಿಸಿರುವುದು ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ವೇಳೆ ಆಧಾರ್ ವೆಬ್ಸೈಟ್ ಚೆಕ್ ಮಾಡಿದ್ದಾರೆ. ಆಗಾ ಯುವಕನ ಕರಾಮತ್ತು ಗೊತ್ತಾಗಿದೆ.
ತಕ್ಷಣ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿ ಮನುನನ್ನ ಬಂಧಿಸಿ ಆಧಾರ್ ಕಾರ್ಡ್ ತಿದ್ದಿದವರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
Kshetra Samachara
16/07/2022 12:37 pm