ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕರ್ನಾಟಕ ರಕ್ಷಣಾ ಪಡೆ ರಾಜ್ಯಾಧ್ಯಕ್ಷ, ನಟ, ನಿರ್ದೇಶಕ ವಿರೇಂದ್ರ ಬಾಬು ಬಂಧನ

ಬೆಂಗಳೂರು: ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಕರ್ನಾಟಕ ರಕ್ಷಣಾ ಪಡೆ ರಾಜ್ಯಾಧ್ಯಕ್ಷ, ಸ್ವಯಂಕೃಷಿ ಚಾನಲ್ ಮಾಲೀಕ ಹಾಗೂ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ವೀರೇಂದ್ರ ಬಾಬುನನ್ನು ಬಂಧಿಸಿದ್ದಾರೆ. ಎಂಎಲ್ಎ, ಎಂಪಿ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ವೀರೇಂದ್ರ ಬಾಬು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.

ರಾಷ್ಟ್ರೀಯ ಜನಹಿತ ಪಕ್ಷದಲ್ಲಿ ಮುಂದಿನ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ವಿರೇಂದ್ರ ಬಾಬು 1 ಕೋಟಿ 88 ಲಕ್ಷ ಹಣ ಪಡೆದಿದ್ದ ಎನ್ನಲಾಗಿದೆ. ಬಸವರಾಜ ಗೋಶಾಲೆ ಎಂಬುವರಿಂದ ಹಣಪಡೆದು ಮೋಸ ಮಾಡಿದ್ದ ಎಂಬ ಮಾಹಿತಿ ಇದೆ. ಹಾಗೆಯೇ ಬೇರೆ ಬೇರೆ ಜನರಿಗೂ ಸಹ ಕರ್ನಾಟಕ ರಕ್ಷಣಾ ಪಡೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಹುದ್ದೆಗಳು ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಲಾಗಿತ್ತು.

ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವೀರೇಂದ್ರಬಾಬು ವಿರುದ್ಧ ದಾಖಲಾಗಿದ್ದ ಬಸವರಾಜು ಅವರ ಪ್ರಕರಣದಲ್ಲಿ ಬಾಬುನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

15/07/2022 01:24 pm

Cinque Terre

17.05 K

Cinque Terre

0

ಸಂಬಂಧಿತ ಸುದ್ದಿ