ಬೆಂಗಳೂರು: ಹಣ ಇದ್ರೆ ಏನ್ ಬೇಕಾದ್ರೂ ಮಾಡಬಹುದು. ಯಾರಿಗ್ ಬೇಕಾದ್ರೂ ಹೊಡಿಬಹುದು ಅನ್ನೋ ಸಿರಿವಂತ ಮನಸ್ಥಿತಿ ನಿಂತಂತೆ ಕಾಣ್ತಾ ಇಲ್ಲ. ಅಮಲಿನಲ್ಲಿ ದೊಡ್ಡವರ ಮಕ್ಕಳು ನಡೆಸುವ ಪುಂಡಾಟ ಬ್ರೇಕ್ ಬೀಳುತ್ತಿಲ್ಲ. ನಾವು ಏನ್ ಮಾಡಿದ್ರೂ ನಡೆಯುತ್ತೆ ಅನ್ನೊ ಮನಸ್ಥಿತಿಯಲ್ಲಿ ಪುಂಡರು ವಕೀಲರೊಬ್ಬರಿಗೆ ಮನಸೋ ಇಚ್ಚೆ ಥಳಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಹಲ್ಲೆಕೋರರಿಗೆ ಅಲ್ರಯ್ಯ ನಾನು ಲಾಯರ್ ಕಣ್ರಪ್ಪ ಅಂತಾ ಹೇಳಿದ್ರು ಬಿಡದೆ ಮನಸೋ ಇಚ್ಚೇ ಥಳಿಸಿರುವ ಘಟನೆ ಕಳೆದ ವಾರ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಪೊಲೀಸ್ ಕಾರ್ನರ್ ಸರ್ಕಲ್ ಬಳಿ ನಡೆದಿದೆ. ಲಾಯರ್ ಪ್ರವೀಣ್ ಗೌಡ, ಬೆನ್ಜ್ ಕಾರೊಂದರ ಪಕ್ಕ ಬಂದು ಸಿಗ್ನಲ್‌ನಲ್ಲಿ ನಿಂತ್ರು. ಕಾರ್ ಪಕ್ಕದಲ್ಲಿ ಪಾಸ್ ಮಾಡ್ಕೊಂಡು ಬೈಕ್‌ನಲ್ಲಿ ಮುಂದೆ ಹೋಗ್ತಿರಬೇಕಾದ್ರೆ, ಕಾರೊಳಗಿದ್ದ ವ್ಯಕ್ತಿ, ಏ ನೋಡ್ಕೊಂಡು ಹೋಗೋಲೆ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸಿಗ್ನಲ್ ಆನ್ ಇದ್ದಿದ್ದರಿಂದ ಬೆನ್ಜ್ ಕಾರ್ ಹಿಂದೆ ವಕೀಲರು ಹೋಗ್ತಿರಬೇಕಾದ್ರೆ, ಕಾರ್ ನಿಲ್ಲಿಸಿ ಕೆಳಗಿಳಿದು ಪ್ರವೀಣ್ ಗೌಡ ಬಳಿಯ ಹೆಲ್ಮೆಟ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಮುಖ, ತುಟಿ ಹಾಗೂ ತಲೆಯ ಭಾಗಕ್ಕೆ ಹಲ್ಲೆ ಮಾಡಿ, ಎಡಭಾಗದ ಭುಜಕ್ಕೆ ಆಯುಧದಿಂದ ಥಳಿಸಿದ್ದಾರೆ. ಕಾರ್‌ನಿಂದ ಡ್ರೈವರ್‌ನನ್ನ ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಮುಖಕ್ಕೆ ಹೊಡೆದಿದ್ರಿಂದ ಲಾಯರ್ ಪ್ರವೀಣ್‌ಗೌಡರ ಒಂದು ಹಲ್ಲು ಮುರಿದಿದೆ. ಹೇಗೊ ತಪ್ಪಿಸಿಕೊಂಡು ಬಂದು ಕಾರಿನ KA 01 MX 1818 ನಂಬರ್ ನೋಟ್ ಮಾಡ್ಕೊಂಡು ಹಲಸೂರು ಗೇಟ್ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದರು. ಆದ್ರೆ ಕಂಪ್ಲೆಂಟ್ ಕೊಟ್ಟು ಒಂದು ವಾರವಾದ್ರು ಪೊಲೀಸರು ಹಲ್ಲೆಕೋರರನ್ನು ಅರೆಸ್ಟ್ ಮಾಡಿರಲಿಲ್ಲ. ಕೊನೆಗೆ ವಕೀಲರ ಸಂಘ ಎಂಟ್ರಿಯಾದಾಗ ರಾಕೇಶ್ ಹಾಗೂ ರಂಗನಾಥ್ ಎಂಬ ಇಬ್ಬರು ಕನ್ಷ್ಟ್ರಕ್ಷನ್ ಕಂಪನಿಯ ಮಾಲೀಕರನ್ನ ಅರೆಸ್ಟ್ ಮಾಡಿದ್ದಾರೆ.
ಈ ಹಿಂದೆ ಅರೆಸ್ಟ್ ಆದ ಆರೋಪಿಗಳ ಕುಟುಂಬಸ್ಥರು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಟಿತ ಕ್ಲಬ್ ನಡೆಸ್ತಿದ್ರಂತೆ. ಮದದಲ್ಲಿ ಸ್ವೇಚ್ಛಾಚಾರಿಗಳಂತೆ ವರ್ತಿಸಿರುವ ಇಂಥವರಿಗೆ ಕಾನೂನಿನ ಪಾಠ ಕಲಿಸಬೇಕಿದೆ. ಸದ್ಯ ಆರೋಪಿಗಳನ್ನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
PublicNext
15/07/2022 12:22 pm