ಆನೇಕಲ್: ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಗೋಪಾಲ್ ರಾಜು ಕಾಲೇಜಿನ ಆಟೋ ಸ್ಟ್ಯಾಂಡ್ ಬಳಿ ನಡೆದಿದೆ. ಆನಂದ್ ಎಂಬಾತರು ಹಲ್ಲೆಗೊಳಗಾದ ವ್ಯಕ್ತಿ.
ನಿನ್ನೆ ಬುಧವಾರ ಸಂಜೆ 7.30ರ ಸುಮಾರಿಗೆ ಆಟೋ ಸ್ಟ್ಯಾಂಡ್‌ನಲ್ಲಿ ಇರುವಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಆನಂದ್ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಸ್ಥಳೀಯರ ಸಹಾಯಕ್ಕೆ ಧಾವಿಸುತ್ತಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನು ಹಲ್ಲೆಗೊಳಗಾದ ವ್ಯಕ್ತಿಯನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಗೆ ಸ್ಪಂದಿಸದ ಕಾರಣಕ್ಕೆ ಬೆಂಗಳೂರು ರವಾನೆ ಮಾಡಲಾಗಿದೆ. ಇನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ವ್ಯಕ್ತಿಗಳು ಯಾರು!? ಕೊಲೆಗೆ ಯತ್ನ ಕಾರಣ ಏನು!? ತನಿಖೆ ನಂತರ ಗೊತ್ತಾಗಲಿದೆ. ಹಲ್ಲೆಗೊಳಗಾದ ಕುಟುಂಬದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಇನ್ನು ಆನೇಕಲ್ ಪೊಲೀಸರು ಕುಟುಂಬಸ್ಥರ ಬಳಿ ಮಾಹಿತಿ ಕಲೆಹಾಕಿದ್ದಾರೆ.
Kshetra Samachara
14/07/2022 01:41 pm