ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಂಡನಿಂದ ವರದಕ್ಷಿಣೆ ಕಿರುಕುಳ, ಡೈವೋರ್ಸ್‌ ಬಾಳಿನ ಚಿಂತೆ; ಕುಣಿಕೆಗೆ ಕೊರಳೊಡ್ಡಿದ ಅನಿತಾ

ನೆಲಮಂಗಲ: ಅವರಿಬ್ಬರೂ ಪ್ರೀತಿಸಿ ಮದುವೆ ಆಗಿದ್ರು. ಸುಖ ಸಂಸಾರ ನಡೆದದ್ದು ಕೇವಲ ಆರು ತಿಂಗಳಷ್ಟೇ! ಈ ನಡುವೆ ಗಂಡ ಒಮ್ಮೆ ಜೈಲಿಗೂ ಹೋಗಿ ಬಂದಿದ್ದ. ಸಂಸಾರದಲ್ಲಿ ಬಿರುಕು ಮೂಡಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿತ್ತು. ಇನ್ನೇನು ನಾಳೆ ಆ ಪ್ರಕರಣದ ತೀರ್ಪು ಬರಬೇಕಿತ್ತು. ಅಷ್ಟರಲ್ಲಿ ಹೆಂಡತಿ ಹೆಣವಾಗಿದ್ದಾಳೆ.

ಈ ಫೋಟೊದಲ್ಲಿ ಕಾಣ್ತಿರೋ ಈಕೆ ಹೆಸ್ರು ಅನಿತಾ (25 ವರ್ಷ) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಉತ್ತರ ತಾಲೂಕು ಮಾದನಾಯಕನ ಹಳ್ಳಿ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿ ನಿವಾಸಿಯಾದ ಈಕೆ ಬಿಕಾಂ ಮುಗಿಸಿ ಐಟಿ ಕಂಪನಿ ಉದ್ಯೋಗಿಯಾಗಿದ್ದಳು.

ಅಲ್ಲೇ ಸ್ವಂತ ಕಾರ್ ಅಟ್ಯಾಚ್ ಮಾಡ್ಕೊಂಡು ಚಾಲಕನಾಗಿದ್ದ ತನ್ನ ಸಂಬಂಧಿ ಪ್ರದೀಪ್‌ನೊಂದಿಗೆ ಪ್ರೇಮಾಂಕುರವಾಗಿ ಪ್ರೀತಿಸಿ ಮದುವೆ ಮಾಡಿಕೊಂಡಿದ್ರು. ಆರಂಭದಲ್ಲಿ ಸಂಸಾರ ಚೆನ್ನಾಗೇ ನಡೀತಿತ್ತು. ಆದ್ರೆ, 6 ತಿಂಗಳಲ್ಲೇ ಸಂಸಾರದಲ್ಲಿ ಬಿರುಗಾಳಿ ಬೀಸ್ತು. ಪ್ರದೀಪ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಬೆನ್ನಲ್ಲೇ ಅನಿತಾ ಈ ನಡುವೆ ಡೈವೋರ್ಸ್ ಪಡೆಯಲು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ರು.

ಇನ್ನೇನು ನಾಳೆ ಡೈವೋರ್ಸ್‌ ತೀರ್ಪು ಬರ್ಬೇಕು, ಅಷ್ಟರಲ್ಲಿ ಈಕೆ ವಿಚ್ಚೇದನ ಪಡೆದು ಬದುಕೋದು ಹೇಗೆ ಎಂದು ಮಾನಸಿಕವಾಗಿ ಕೊರಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ! ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ಪ್ರದೀಪ್ ಹಾಗೂ ಆತನ ತಾಯಿಯ ತಲಾಶೆಯಲ್ಲಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

14/07/2022 10:44 am

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ