ಬೆಂಗಳೂರು: ಪೇಂಟಿಂಗ್ ಕೆಲಸದಲ್ಲಿ ಬರೋ ಆದಾಯ ಜೀವನಕ್ಕೆ ಸಾಕಾಗ್ತಿತ್ತು. ಆದ್ರೆ ಈ ಮಧ್ಯೆ ಪಬ್ ನಲ್ಲಿ ಮೋಜು ಮಸ್ತಿಯ ರುಚಿ ಕಂಡಿದ್ದವರು ಒಂದೆರಡು ವೀಕ್ ಎಂಡ್ ನಲ್ಲಿ ಪಬ್ ನಲ್ಲಿ ನಶ ಏರಿಸಿಕೊಂಡು ಮಸ್ತಿ ಕೂಡ ಮಾಡಿದ್ರು. ಆದ್ರೆ ಮೋಜಿಗೆ ಕೂಲಿ ಕೆಲಸದಿಂದ ಬರ್ತಿದ್ದ ಹಣ ಸಾಕಗ್ತಿಲ್ಲ ಅಂತ ಸರಗಳ್ಳತನ ಪ್ಲಾನ್ ಮಾಡಿಕೊಂಡಿದ್ರು.
ಸರಗಳ್ಳತನ ಮಾಡಲು ಹಲವು ಕ್ರೈಂ ಎಪಿಸೋಡ್ ಗಳನ್ನ ಯೂಟ್ಯೂಬ್ ನಲ್ಲಿ ನೋಡಿ ಸರಗಳ್ಳತನ ಮಾಡಲು ಮೊದಲಿಗೆ ಬೈಕ್ ಕಳವು ಮಾಡಿ ನಂತರ ಸರಗಳ್ಳತನಕ್ಕೆ ಇಳಿತಿದ್ರು. ಬೆಂಗಳೂರು ದಕ್ಷಿಣ ಭಾಗದಲ್ಲಿ ಸಾಕಷ್ಟು ಕಡೆ ಚೈನ್ ಸ್ನಾಚ್ ಮಾಡಿ ಸಕ್ಸಸ್ ಆಗಿದ್ದ ಆರೋಪಗಳ ನಸೀಬ್ ಕೆಟ್ಟು ಚೆನ್ನಮ್ಮನಕೆರೆ ಪೊಲೀಸ್ರ ಅತಿಥಿಯಾಗಿದ್ದಾರೆ.
ಮೋಹನ್ ಹಾಗೂ ಸುರೇಶ್ ಬಂಧಿತ ಆರೋಪಿಗಳಾಗಿದ್ದು ಇಬ್ರು ಕೂಡ ವೃತ್ತಿಯಲ್ಲಿ ಪೇಂಟರ್ ಗಳಾಗಿದ್ರು. ಪಬ್ ಗಳಲ್ಲಿನಡೆಯುವ ಮೋಜು ಮಸ್ತಿ ಬಗ್ಗೆ ಭಾರಿ ವ್ಯಾಮೋಹ ಇಟ್ಟುಕೊಂಡಿದ್ದ ಆರೋಪಿಗಳು ಬೈಕ್ ಕದ್ದು, ಕದ್ದ ಬೈಕ್ ನಲ್ಲಿ ಸರಗಳ್ಳತನಕ್ಕೆ ಇಳಿಯುತ್ತಿದ್ದರು. ಸದ್ಯ ಆರೋಪಿಗಳ ಬಂಧನದಿಂದ 4 ಲಕ್ಷ 68 ಸಾವಿರ ಮೌಲ್ಯದ ಮೂರು ಬೈಕ್ ಹಾಗೂ ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳನ್ನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
Kshetra Samachara
11/07/2022 11:58 am