ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ ಪೆಡ್ಲಿಂಗ್ ನಲ್ಲಿ‌ತೊಡಗಿದ್ದ ನೈಜೀರಿಯಾ ಮೂಲದ ಖ್ಯಾತ ಯುಟ್ಯೂಬರ್‌ ಸೇರಿ ಇಬ್ಬರ ಬಂಧನ

ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಓಬೆಜಿ ಜಸ್ಟಿಸ್ ಅಲಿಯಾಸ್ ಮೋಲಾ ಮತ್ತು ಸಾಮ್ಯುಯಲ್ ಬಂಧಿತರು. ಆರೋಪಿಗಳಿಂದ 30 ಸಾವಿರ ರೂ ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್, 1,200 ರೂ. ನಗದು ಜಪ್ತಿ ಮಾಡಲಾಗಿದೆ. ಇಬ್ಬರ ವೀಸಾ ಅವಧಿ ಮುಗಿದು ಒಂದು ವರ್ಷಗಳಾಗಿದ್ದು, ನಗರದಲ್ಲಿಯೇ ಅಕ್ರಮವಾಗಿ ವಾಸವಾಗಿದ್ದರು.

ಜೀವನ ನಡೆಸೋಕೆ ಅಂತಾ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ರೂ. ಆರೋಪಿಗಳ ಪೈಕಿ ಮೋಲಾ ಪ್ರಖ್ಯಾತ ಯುಟ್ಯೂಬರ್ ಆಗಿದ್ದಾನೆ. ಯುಟ್ಯೂಬ್‌ನಲ್ಲಿ ಎಂಎಂಡಿ ಮೋಲಾ ಹೆಸರಿನಲ್ಲಿ ಹತ್ತಾರು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ. ಸ್ಥಳೀಯ ಸರ್ಕಾರದ ವಿರುದ್ಧ ಕೆಲ ಹೇಳಿಕೆ ಸಹ ನೀಡಿದ್ದಾನೆ.

ನಗರಕ್ಕೆ ಬಂದಾಗಲೂ ಕೆಲ ವಿಚಾರಗಳ ಕುರಿತು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇನ್ನೂ ಈತನ ಸ್ನೇಹಿತ ಸಾಮ್ಯುಯಲ್ ಜತೆ ಸೇರಿಕೊಂಡು ನೆರೆ ರಾಜ್ಯಗಳಲ್ಲಿರುವ ಸ್ನೇಹಿತರ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆ ನಡೆಸುತ್ತಿದ್ದ.

Edited By : PublicNext Desk
Kshetra Samachara

Kshetra Samachara

09/07/2022 08:24 pm

Cinque Terre

2.12 K

Cinque Terre

0

ಸಂಬಂಧಿತ ಸುದ್ದಿ