ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಕ್ರಮದಲ್ಲಿ ಭಾಗಿ ಅಧಿಕಾರಿಗಳು ದಲ್ಲಾಳಿಗಳು ಬಲೆಗೆ ಬಿದ್ದಿರೋ ಬೆನ್ನಲ್ಲೆ ಮತ್ತಷ್ಟು ಮಂದಿಗೆ ಬಂಧನ ಭೀತಿ ಎದುರಾಗಿದೆ. ಅದು ಈ ಹಿಂದೆ ಖಾಕಿ ತೊಟ್ಟು ನೇಮಕಾತಿ ಹಗರಣದಲ್ಲಿ ಕಣ್ಣಾಮುಚ್ಚಾಲೆ ಆಡ್ತಿರೋ ಪಿಎಸ್ ಐ ಗಳಿಗೆ ಅನ್ನೋದೆ ದುರಂತ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ತನಿಖೆ ಕೈಗೊಂಡಿರೋ ಸಿಐಡಿ ಪೊಲೀಸ್ರು ತನಿಖೆ ಚುರುಕುಗೊಳಿಸ್ತಿದ್ದಂತೆ ಒಂದೊಂದೆ ಅಕ್ರಮಗಳು, ಅಕ್ರಮಗಳ ಒಂದೊಂದೆ ಆಯಾಮಗಳು ಬೆಳಕಿಗೆ ಬರ್ತಿದ್ದು, ಮತ್ತಷ್ಟು ಮಂದಿಗೆ ಬಂಧನ ಭೀತಿ ಎದುರಾಗಿದೆ. ಅದ್ರಲ್ಲಿ ಸದ್ಯ ಖಾಕಿ ತೊಟ್ಟು ಬೆಚ್ಚಗೆ ಡ್ಯೂಟಿ ಮಾಡ್ತಿರೋ ಪಿಎಸ್ಐ ಗಳ ದೊಡ್ಡ ಲಿಸ್ಟ್ ಇದ್ದಂಗಿದೆ. 2015ರಿಂದ 2019ರ ನೇಮಕಾತಿಯಲ್ಲಿ ಟಾಪ್ Rank ಪಡೆದವ್ರ ಮೇಲೆ ಸದ್ಯ ಸಿಐಡಿ ಕಣ್ಣು ಬಿದ್ದಿದೆ.
ಮೊನ್ನೆ ಮೊನ್ನೆ ಇದೇ ಪಿಎಸ್ಐ ನೇಮಕಾತಿಯಲ್ಲಿ ಡೀಲ್ ಮಾಡಲು ಹೋಗಿ ಬ್ಯಾಡರಹಳ್ಳಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಅಂದರ್ ಆಗ್ತಿದ್ದಂತೆ ಮತ್ತಷ್ಟು ಸಬ್ ಇನ್ಸ್ ಪೆಕ್ಟರ್‌ಗಳಿಗೆ ಬಂಧನ ಭೀತಿ ಎದುರಾಗಿದೆ. ಅದಕ್ಕೆ ಕಾರಣ ಸಿಐಡಿ ಅಧಿಕಾರಿಗಳು ನೀಡಿರೋ ನೋಟಿಸ್‌ಗೆ ಬೆಚ್ಚಿ ಕೆಲವರು ಊರು ಬಿಟ್ಟಿದ್ದಾರೆ. ಬೆಂಗಳೂರಿನ ಪಶ್ಚಿಮ ವಿಭಾಗದ ವಿವಿಧ ಪೊಲೀಸ್ ಸ್ಟೇಷನ್ ಗಳಲ್ಲಿ ಕೆಲಸ ಮಾಡೋ ಮೂವರು ಪಿಎಸ್ಐಗಳು ಹಾಗೂ ದಕ್ಷಿಣ ವಿಭಾಗದಲ್ಲಿ ಸೇವೆ ಸಲ್ಲಿಸ್ತೀರೋ ಇಬ್ಬರು ಪಿಎಸ್ಐಗಳಿದ್ದಾರೆ ಅನ್ನೋದೆ ದುರಂತ.
ಪಿಎಸ್ಐ ನೇಮಕಾತಿಯಲ್ಲಿ ಕೋಟಿ ಕೋಟಿ ಡೀಲ್ ಮಾಡಿರೋ ಆರೋಪ ಕೇಳಿ ಬಂದಿದೆ. ಹಳೆ ಲಿಂಕ್ ಮೇಲೆ ಹೊಸಬರನ್ನ ಹುಡುಕಿ ಹುಡುಕಿ ಡೀಲ್ ನಡೆಸಿದ್ದಾರೆ ಅನ್ನೋದು ಸಿಐಡಿ ಅನುಮಾನ. ಇದೇ ಕಾರಣಕ್ಕೆ ತಲೆ ಮರೆಸಿಕೊಂಡವರ ಓಎಂಆರ್ ಶೀಟ್ ತರಿಸಿ ತನಿಖೆ ನಡೆಸಲು ಸಿಐಡಿ ಮುಂದಾಗಿದೆ.
ಒಂದು ವೇಳೆ ಸಿಐಡಿ ಅಂದುಕೊಂಡಂತೆ ತಲೆಮರೆಸಿಕೊಂಡೊರೋ ಹಳೆ ಪಿಎಸ್‌ಐಗಳ ಓಎಂಆರ್ ಶೀಟ್‌ನಲ್ಲಿ ಲೋಪಗಳು ಕಂಡು ಬಂದ್ರೆ ಇಡೀ ನೇಮಕಾತಿಯ ಅಭ್ಯರ್ಥಿಗಳ ಓಎಂಆರ್ ಶೀಟ್ ಮತ್ತೊಮ್ಮೆ ಪರಿಶೀಲನೆ ನಡೆಸೋ ಸಾಧ್ಯತೆಯಿದೆ.
ಇನ್ನೂ ಕಳೆದ ಸುಮಾರು ವರ್ಷಗಳಿಂದ ಸದ್ಯ ಬಂಧನವಾಗಿರೋ ಡಿವೈಎಸ್ಪಿ ಶಾಂತಕುಮಾರ ನೇಮಕಾತಿ ವಿಭಾಗದಲ್ಲಿ ಠಿಕಾಣೆ ಉಡಿದ್ದು ಹಿಂದೆಯೂ ಕೂಡ ಇದೇ ರೀತಿ ಕಳ್ಳದಾರಿಯಲ್ಲಿ ಅಭ್ಯರ್ಥಿಗಳನ್ನ ಪಿಎಸ್ ಐ ಮಾಡಿರೋ ಶಂಕೆ ವ್ಯಕ್ತವಾಗಿದೆ.
PublicNext
09/07/2022 08:06 pm