ಬೆಂಗಳೂರು: ಗಾಂಜಾ ದಂಧೆಯಿಂದ ಅಕ್ರಮವಾಗಿ ಸಂಪಾದಿಸಿದ್ದ ಸುಮಾರು 50 ಲಕ್ಷ ರೂ ಮೌಲ್ಯದ ಚರಾಸ್ಥಿ ಹಾಗೂ ಸ್ಥಿರಾಸ್ತಿಯನ್ನು ಸಿಸಿಬಿ ಮುಟ್ಟು ಮುಟ್ಟುಗೋಲು ಹಾಕಿಕೊಂಡಿದೆ. ಆಸ್ತಿ ಮುಟ್ಟುಗೋಲಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ವಶಕ್ಕೆ ಪಡೆಯುವಲ್ಲಿ ಕೇಂದ್ರ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಥಮ ಬಾರಿಗೆ ನಗರದ ಸಿಸಿಬಿ ಪೊಲೀಸರು ಎನ್ ಡಿ.ಪಿ.ಎಸ್ ಕಾಯ್ದೆ ಅಧಿಕಾರವನ್ನು ಚಲಾಯಿಸಿ 50 ಲಕ್ಷ ರೂ ಮೌಲ್ಯದ ಅಕ್ರಮ ಚರಾಸ್ಥಿ ಹಾಗೂ ಸ್ಥಿರಾಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡು ಗಾಂಜ ಪೆಡ್ಲರ್ ಗಳಿಗೆ ಶಾಕ್ ನೀಡಿದ್ದಾರೆ.
ಗಾಂಜ ದಂಧೆಕೋರ ಮಲ್ಲೇಶ್ ನ ಆಸ್ತಿ ಮುಟ್ಟುಗೋಲುಹಾಕಿಕೊಂಡಿದ್ದು, ಮಲ್ಲೇಶ್ ತಮಿಳುನಾಡು, ಆಂಧ್ರಪ್ರದೇಶ,ಒರಿಸ್ಸಾ ರಾಜ್ಯಗಳಿಂದ ಗಾಂಜಾವನ್ನು ತರಿಸಿ ಅಕ್ರಮವಾಗಿ ಮಾರಾಟ ಮಾಡಿದ್ದ. ಇದ್ರಿಂದ ಗಳಿಸಿದ್ದ ಹಣದಲ್ಲಿ 2013ನೇ ಇಸವಿಯಲ್ಲಿ ತನ್ನ ಮಗ ಹಾಗೂ ಪತ್ನಿಯ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆಯ ಗ್ರಾಮದಲ್ಲಿ ಖರೀದಿಸಿದ್ದ ಸುಮಾರು 50 ಲಕ್ಷ ರೂ ಬೆಲೆ ಬಾಳುವ 8 ಎಕರೆ ಕೃಷಿ ಜಮೀನು ಹಾಗೂ ಇವರುಗಳಿಗೆ ಸೇರಿದ 5 ಬ್ಯಾಂಕ್ 2 ಖಾತೆಗಳಲ್ಲಿದ್ದ ಸುಮಾರು 3 ಲಕ್ಷ ರೂ ಹಣವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು.
ಕಳೆದ ಸುಮಾರು 12 ವರ್ಷಗಳಿಂದ ಗಾಂಜಾ ಕಳ್ಳಸಾಗಾಣಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಮಲ್ಲೇಶ್, ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ವಿವಿಧ ಪೊಲೀಸ್ರು ಮಲ್ಲೇಶ್ ನನ್ನ ಗಾಂಜಾ ಕೇಸ್ ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ರು.
Kshetra Samachara
09/07/2022 05:37 pm