ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೈಟ್‌ಫೀಲ್ಡ್ ಪೊಲೀಸರಿಂದ ನಕಲಿ ಕಾಲ್‌ಸೆಂಟರ್‌ಗಳ ಮೇಲೆ ದಾಳಿ-11 ಜನ ಬಂಧನ

ವರದಿ- ಬಲರಾಮ್ ವಿ

ಬೆಂಗಳೂರು: ವೈಟ್‌ಫೀಲ್ಡ್ ಉಪ-ವಿಭಾಗದ ವೈಟ್‌ಫೀಲ್ಡ್ ಪೊಲೀಸರು ನಕಲಿ ಕಾಲ್‌ಸೆಂಟರ್‌ಗಳ ಮೇಲೆ ದಾಳಿ ನಡೆಸಿ 11 ಜನ ಗುಜರಾತ್ ರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ.

ರೀಷಿ ವ್ಯಾಸ್, ಪ್ರತೀಕ್, ಪರೀಕ್ ಬಿರೆನ್, ಹೆತ್ ಪಟೇಲ್, ಕರಣ್ ಲಾಡನ್, ಸಯ್ಯದ್ ಇಬ್ರಾತ್, ಜೀತಿಯಾ ಕೃಷ್ಣ, ಬಿಹಾಂಗ್, ರಾಜ್ ಸೋನಿ,ಮಿತೇಶ್ ಗುಪ್ತಾ, ವಿಶಾಲ್ ಪರ್ಮಾರ್, ಬಂಧಿತ ಆರೋಪಿಗಳು.

ಆರೋಪಿಗಳಿಂದ ಸುಮಾರು 2 ಕೋಟಿ ಬೆಲೆಯ 127 ಡೆಸ್ಕ್ಟಾಪ್‌ಗಳು, 4 ಲ್ಯಾಪ್‌ಟಾಪ್, 150 ಹೆಡ್‌ಪೋನ್‌, 10 ಇಂಟರ್‌ನಲ್ ಹಾರ್ಡ್‌ಡಿಸ್ಕ್ ಮತ್ತು ಆ್ಯಪಲ್ ಕಂಪನಿಯ 6 ಮೊಬೈಲ್‌ಗಳು ಹಾಗೂ ಬೆಲೆ ಬಾಳುವ 3 ಕಾರುಗಳು, ಎರಡು ಶಾಲಾ ವಾಹನ, ಒಂದು ಟಿಟಿ ವಾಹನಗಳನ್ನು ಹಾಗೂ ನಗದು ಹಣ 18 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ.

ಎ.ಸಿ.ಪಿ. ಶ್ರೀ ಶಾಂತಮಲ್ಲಪ್ಪ ಮಾಹಿತಿಯ ಮೇರೆಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಇ.ಪಿ.ಐ.ಪಿ ಏರಿಯಾದ ಗಾಯತ್ರಿ ಟೆಕ್‌ ಪಾರ್ಕ್‌, ಏಥಿಕಲ್ ಇನ್‌ಪೋ ಕಂ ಪ್ರೈ.ಲಿ. ನಕಲಿ ಕಾಲ್ ಸೆಂಟರ್ ಅನ್ನು ನಡೆಸಿಕೊಂಡು ಕಂಪ್ಯೂಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಅಂತರ್‌ ಜಾಲ ಮತ್ತು ದೂರವಾಣಿ ಮೂಲಕ ವಿದೇಶಗಳಲ್ಲಿರುವ ಸಾರ್ವಜನಿಕರನ್ನು ಸಂಪರ್ಕಿಸಿ ಸುಳ್ಳು ಹೇಳಿ ನಂಬಿಸಿ ಬ್ಯಾಂಕ್ ಖಾತೆಗಳ ಮತ್ತು ಇತರೆ ವಿವರಗಳನ್ನು ಪಡೆದು ಸಾರ್ವಜನಿಕರಿಂದ ಹಣವನ್ನು ಲಪಟಾಯಿಸಿ ಮೋಸ ಮಾಡುತ್ತಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಮಾಹಿತಿಯ ಮೇರೆಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಹಾಗೂ ಸೆನ್ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

Edited By :
Kshetra Samachara

Kshetra Samachara

08/07/2022 03:55 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ