ಬೆಂಗಳೂರು: ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿ ಶೀಟರ್‌ಗಳು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಜೈಲಿಂದ ಹೊರಬರುತ್ತಿರುವ ಖತರ್ನಾಕ್‌ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹವಾ ಎಬ್ಬಿಸುತ್ತಿದ್ದಾರೆ. ಇವರ ಬೆಂಬಲಿಗರು ಅಷ್ಟೇ ಏನೋ ಸಾಧನೆ ಮಾಡಿ ಬಂದಿದ್ದಾರೆ ಅನ್ನೋ ರೇಂಜ್‌ಗೆ ಬಿಲ್ಡಪ್ ಕೊಡುತ್ತಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಸಿಸಿಬಿ ಪೊಲೀಸರು, ಫುಲ್ ಆ್ಯಕ್ಟೀವ್ ಆಗಿದ್ದಾರೆ. ಯಾವುದೇ ಅಪರಾಧ ಕೃತ್ಯಗಳಲ್ಲಿ ರೌಡಿಗಳು ಭಾಗಿಯಾಗಬಾರದು ಎಂಬ ಉದ್ದೇಶದಿಂದ ರೌಡಿಶೀಟರ್‌ಗಳ ಮನೆ ಮೇಲೆ ಮಧ್ಯರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕುಖ್ಯಾತ ರೌಡಿಶೀಟರ್‌ಗಳಾದ ಮೈಕಲ್,ರಾಮ,ಕೋತಿರಾಮ, ಮಾರ್ಕೆಟ್ ವೇಡಿ ಸೇರಿ ಹಲವರಿಗೆ ಶಾಕ್ ನೀಡಿದ್ದಾರೆ.
ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳಿವೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ರೌಡಿಗಳು ಪಾತಕಿ ಕೃತ್ಯವೆಸಗಲು ಸಂಚು ರೂಪಿಸಿದ್ದಾರಾ ಎಂಬ ಕುರಿತು ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನೂ ರೌಡಿಗಳಿಗೆ ತಮ್ಮದೇ ಸ್ಟೈಲ್ ನಲ್ಲಿಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಿದ್ದಾರೆ.ಧಾರವಾಡ ಜೈಲಲ್ಲಿರುವ ಬಾಂಬೆ ಸಲೀಂನನ್ನು ವಿಚಾರಣೆ ನಡೆಸಿರುವ ಸಿಸಿಬಿ ಅವನ ಪಟಾಲಂ ಬಾಲ ಬಿಚ್ಚದಂತೆ ನೋಡಿಕೊಳ್ಳುವಂತೆ ವಾರ್ನ್ ಮಾಡಿದ್ದಾರೆ.
PublicNext
01/07/2022 02:53 pm