ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚೋರತನ ಬಳಿಕ ಬದಲಾದ ಅಂತಃಕರಣ; ಕದ್ದ ಚಿನ್ನ ವಾಪಸ್ ತಂದಿಟ್ಟ ಖದೀಮ!

ಬೆಂಗಳೂರು: ಒಮ್ಮೆ ಕಳ್ಳತನವಾದ ವಸ್ತು ವಾಪಸ್ ಸಿಗೋದು ತುಂಬಾನೇ ಕಡಿಮೆ. ಆದರೆ, ಇಲ್ಲೊಬ್ಬ ಕಳ್ಳ ಬಂಧನ ಭೀತಿಯಲ್ಲೂ ರಾತ್ರಿ ಮುಗಿದು ಬೆಳಗಾಗೋ ಹೊತ್ತಿಗೆ ಕದ್ದ ಚಿನ್ನವನ್ನು ಮರಳಿ ತಂದಿಟ್ಟು ಹೋಗಿದ್ದಾನೆ! ಈ ಬಗ್ಗೆ ಆಸಕ್ತಿದಾಯಕ ಸುದ್ದಿ ಇಲ್ಲಿದೆ...

ಯಲಹಂಕದ ಬಾಗಲೂರು ಠಾಣೆ ವ್ಯಾಪ್ತಿಯ ಅರೇಬಿನ್ನಮಂಗಲ ನಿವಾಸಿ ಭರತ್ ಜೂ.14ರಂದು ತನ್ನ ವಯಸ್ಸಾದ ತಾಯಿನ ಮನೆಲೇ ‌ಬಿಟ್ಟು ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿದ್ದರು. ಬೆಳಗ್ಗೆ ಹೋಗಿ ಸಂಜೆ ಬಂದು ನೋಡುವಷ್ಟರಲ್ಲಿ ಮನೆಲಿದ್ದ ನಾಲ್ಕೂವರೆ ಲಕ್ಷದ ಚಿನ್ನಾಭರಣ ಹಾಗೂ ಹತ್ತು ಸಾವಿರ ನಗದು ಕಳವಾಗಿತ್ತು. ಮಧ್ಯಾಹ್ನವೇ ಮನೆಲಿ ಕಳ್ಳತನ ಆಗಿರೋದನ್ನು ನೋಡಿ ಶಾಕ್ ಆಗಿದ್ರು. ಮಾರನೇ ದಿನ ಬಾಗಲೂರು ಪೊಲೀಸ್ ಠಾಣೆಲಿ ಈ ಬಗ್ಗೆ ದೂರು ನೀಡಿದ್ದರು.

.

ಕುಟುಂಬಸ್ಥರು ಚಿನ್ನಾಭರಣ ಕಳ್ಳತನ ಆಗಿರೋ ಬಗ್ಗೆ ಠಾಣೆಯಲ್ಲಿ ದೂರು‌ ನೀಡಿ ಮನೆಗೆ ಬಂದಿದ್ದರು. ಪೊಲೀಸರು ‌ಕೂಡ ಮನೆಗೆ ಬಂದು ಪರಿಶೀಲನೆ ನಡೆಸಿದ್ದರು. ವಿಚಿತ್ರ ಅಂದರೆ, ರಾತ್ರಿ ಮುಗಿದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಕಳ್ಳತನವಾಗಿದ್ದ ಅಷ್ಟೂ ಒಡವೆ, ನಗದು ಮನೆ ಬಾಗಿಲ ಬಳಿ ಇಟ್ಟು ‌ಹೋಗಲಾಗಿತ್ತು! ಬೆಳ್ಳಂಬೆಳಗ್ಗೆ ಚಿನ್ನಾಭರಣ ನೋಡಿ ಆಶ್ಚರ್ಯ ಚಕಿತರಾದ ಕುಟುಂಬಸ್ಥರು, ಕಳವಾದ ಚಿನ್ನಾಭರಣ ಸಿಕ್ಕ ಖುಷಿಯಲ್ಲಿದ್ದಾರೆ. ಬಂಧನ ಭೀತಿಯಿಂದ ಕಳ್ಳ ತಂದಿಟ್ಟಿರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕಳವಾದ ಚಿನ್ನವನ್ನು ಒಂದೇ ದಿನದಲ್ಲಿ ಕಳ್ಳ ವಾಪಸ್ ತಂದಿಟ್ಟು ಹೋಗಿದ್ದು ನೋಡಿದ್ರೆ, ಯಾರೋ ಪರಿಚಯಸ್ಥನೇ ಈ ಕೃತ್ಯ ಎಸಗಿರುವ ಬಗ್ಗೆ ಗುಮಾನಿ ಎದ್ದಿದೆ. ಆದರೂ ಪ್ರಕರಣ ಕೈಬಿಡದ ಪೊಲೀಸರು, ಕಳ್ಳನಿಗಾಗಿ ಹುಡುಕಾಡುತ್ತಿದ್ದಾರೆ.

- ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ಯಲಹಂಕ

Edited By : Shivu K
Kshetra Samachara

Kshetra Samachara

29/06/2022 08:22 am

Cinque Terre

5.2 K

Cinque Terre

0

ಸಂಬಂಧಿತ ಸುದ್ದಿ