ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಾದಗಿರಿಯಲ್ಲಿ ಕದ್ದಿದ್ದ ಚಿನ್ನವನ್ನ ಪೀಣ್ಯದಲ್ಲಿ ಮಾರಲು ಯತ್ನಿಸಿದ್ದ ಆರೋಪಿಗಳು

ಬೆಂಗಳೂರು: ಕಳ್ಳತನ ಒಮ್ಮೆ ಮೈಗೂಡಿಸಿಕೊಂಡ್ರೆ ಮುಗೀತು ಮತ್ತೆ ಮತ್ತೆ ಕಳ್ಳತನಕ್ಕೆ ಚಟ ಪ್ರೇರೆಪಿಸುತ್ತದೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕಳ್ಳತನ‌ ಕೇಸ್‌ನಲ್ಲಿ ಅದಾಗ್ಲೆ ಜೈಲು ಸೇರಿ ಶಿಕ್ಷೆ ಅನುಭವಿಸಿದರೂ ಮತ್ತೆ ಕಳ್ಳತನದ ಕಸುಬನ್ನೇ ಮುಂದುವರೆಸಿದ್ದ ನಾಲ್ವರು ಕುಖ್ಯಾತ ಖದೀಮರನ್ನು ಪೀಣ್ಯ ಪೊಲೀಸರು ಬಂದಿಸಿದ್ದಾರೆ.

ಕಳೆದ ಜೂನ್ 2ರಂದು ಪೀಣ್ಯದ ವಿದ್ಯಾನಗರದಲ್ಲಿರುವ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನವಾಗಿತ್ತು.‌‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಧರ್ಮೇಂದ್ರ ನೇತೃತ್ವದ ತಂಡ ನಾಲ್ವರು ಆರೋಪಿಗಳಾದ ಫಯಾಜ್ ಅಹಮ್ಮದ್, ಮಹೇಶ್, ಪ್ರಸಾದ್ ಹಾಗೂ ಸುಮಂತ್ ಎಂಬುವರನ್ಜು ಬಂಧಿಸಿ 35.47 ಲಕ್ಷ ರೂ. ಮೌಲ್ಯದ 655 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಜಪ್ತಿ ಮಾಡಿ ಜೈಲಿಗಟ್ಟಿದೆ.

ಪ್ರಕರಣದ ರೂವಾರಿ ಫಯಾಜ್ ಅಹಮ್ಮದ್ ಮೂಲತಃ ಗುಜರಿ ವ್ಯಾಪಾರಿಯಾಗಿದ್ದು, 1990ರಿಂದ ಕಳ್ಳತನದ ಕಸುಬನ್ನ ಆರಂಭಿಸಿದ್ದ. ಈತನ ವಿರುದ್ಧ ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ 24 ಪ್ರಕರಣ ದಾಖಲಾಗಿದ್ದು, ಈ ಪೈಕಿ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಎರಡನೇ ಆರೋಪಿ ಮಹೇಶ್ ಕಾರು ಚಾಲಕನಾಗಿದ್ದು 2010ರಿಂದ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ದಾಖಲಾಗಿದ್ದ 21 ಪ್ರಕರಣಗಳ ಪೈಕಿ 11 ಪ್ರಕರಣಗಳಲ್ಲಿ ಜೈಲು ಶಿಕ್ಷೆಯಾಗಿದೆ.‌ ಮತ್ತಿಬ್ಬರಾದ ಪ್ರಸಾದ್‌ ಕೊಲೆ ಪ್ರಕರಣದಲ್ಲಿ ಭಾಗಿಯಾದರೆ ಮೂರನೇ ಆರೋಪಿ ಮಹೇಶ್ ಸಂಬಂಧಿಯಾಗಿರುವ ಸುಮಂತ್ ಕದ್ದ ಚಿನ್ನಾಭರಣ ಅಡ ಇಡಲು ನೆರವು ನೀಡುತ್ತಿದ್ದ.‌ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾಗ ಒಬ್ಬರಿಗೊಬ್ಬರು ಪರಿಚಯಗೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ವರ್ಷಾನುಗಟ್ಟಲೇ ಸೆರಮನೆಯಲ್ಲಿದ್ದರೂ ತಲೆಕೆಡಿಸಿಕೊಳ್ಳದ ಖದೀಮರು ಜಾಮೀನಿನ ಮೇರೆಗೆ ಹೊರಬಂದು ಪ್ಲ್ಯಾನ್ ರೂಪಿಸಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ತನ್ನ‌ ಕೈಚಳಕ ತೋರಿಸಿದ್ದರು. ಪೀಣ್ಯ ಕಳ್ಳತನಕ್ಕೂ ಮುನ್ನ ಯಾದಗಿರಿಯಲ್ಲಿ ಚಿನ್ನ ಕಳವು ಮಾಡಿದ್ದ ಆರೋಪಿಗಳು ಪೀಣ್ಯಾದಲ್ಲೂ ತಮ್ಮ ಕೈಚಳಕ ತೋತಿದ್ರು. ಕದ್ದ ಚಿನ್ನವನ್ನು ಮಾರಾಟ ಮಾಡುವಾಗ ಪೊಲೀಸ್ರಿಗೆ ಸಿಕ್ಕಿ ಬಿದ್ದಿದ್ದಾರೆ.

ಇನ್ನೂ ಈ ಪ್ರೊಫೆಷನಲ್ ಮನೆಗಳ್ಳರು ಪೊಲೀಸರಿಗೆ ಸಾಕ್ಷ್ಯಸಿಗದಿರಲು ಕಳ್ಳತನ ವೇಳೆ‌ ಕೈಗಳಿಗೆ ಗ್ಲೌಸ್ ತೊಡುತ್ತಿದ್ದರು. ಅಲ್ಲದೆ ಆರೋಪಿಗಳು ಮೊಬೈಲ್ ಸಹ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

28/06/2022 05:26 pm

Cinque Terre

38.92 K

Cinque Terre

0

ಸಂಬಂಧಿತ ಸುದ್ದಿ