ಬೆಂಗಳೂರು: ಎರಡು ದಿನ ವಿಚಾರಣೆ ಬಳಿಕ ಸೌತ್ ಇಂಡಿಯಾದಲ್ಲಿ ದೊಡ್ಡ ಬ್ಯುಸಿನೆಸ್ ಮೆನ್ ಅನಿಸಿಕೊಂಡಿದ್ದ ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಡುರಂಗರನ್ನ ಇಡಿ ಅಧಿಕಾರಿಗಳು ಬಂಧಿಸಿ ಹತ್ತು ದಿನ ಕಸ್ಟಡಿಗೆ ಪಡೆದಿದ್ದಾರೆ.
ಕಳೆದ ವರ್ಷವಷ್ಟೇ ಮಂತ್ರಿ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು ಈ ವೇಳೆ ಅಕ್ರಮ ಹಣಕಾಸು ವ್ಯವಹಾರ ನಡೆದಿರೋದು ಕಂಡು ಬಂದಿತ್ತು. ಈ ಹಿನ್ನೆಲಡಯಲ್ಲಿ ಕಳೆದೆರಡು ದಿನಗಳಿಂದ ಸುಶೀಲ್ ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಇಂದು ಬಂಧಿಸಿದ್ದಾರೆ.
ಇನ್ನೂ ಸುಶೀಲ್ ಬಂಧನಕ್ಕೆ ಪ್ರಮುಖ ಕಾರಣಗೇಳು ಅಂತ ನೋಡೋದಾದ್ರೆ. ಸುಶೀಲ್ ಮಂತ್ರಿ ಗ್ರೂಪ್ ನಲ್ಲಿ ಫ್ಲಾಟ್ ಖರೀದಿಸಿದ್ದ ಕೆಲವರಿಗೆ ರಿಜಿಸ್ಟ್ರೇಷನ್ ಮಾಡಿಕೊಟ್ಟಿರಲಿಲ್ಲ.ಅವರು ಕೇಳಿದಾಗೆಲ್ಲ ರಿಜಿಸ್ಟ್ರೇನ್ ಡೇಟ್ ಕೊಟ್ಟು ಮುಂದೆ ಹಾಕುತ್ತಿದ್ರು.
ಫ್ಲಾಟ್ ಖರೀದಿದಾರು ಯಾವಾಗ ಗಲಾಟೆಗೆ ಬಿದ್ರೋ ಅಗ ಅವರಿಗೆ ಪರ್ಸಂಟೇಜ್ ಲೆಕ್ಕದಲ್ಲಿ ಕಮೀಷನ್ ನೀಡೋದಾಗಿ ಹೇಳಿ ಖತೀದಿದಾರರ ಬಾಯಿ ಮುಚ್ಚಿಸಿದ್ರು. ಅದ್ರೆ ಆ ಕಮೀಷನ್ ಹಣವನ್ನು ಕೂಡ ನಗದು ರೂಪದಲ್ಲಿ ನೀಡಿ ಬ್ಲಾಕ್ ಅಂಡ್ ವೈಟ್ ವರ್ಗಾವಣೆ ಮಾಡಿದ್ರು. ಕೇವಲ ಐದು ಲಕ್ಷ ನಗುದು ವ್ಯವಹಾರಕ್ಕೆ ಅನುಮತಿ ಇದ್ರೂ ಅನ್ಲೈನ್ ನಲ್ಲಿ ಮಾಡಬೇಕಾದ ಎಲ್ಲಾ ವ್ಯವಹಾರವನ್ನ ನಗದು ರೂಪದಲ್ಲೇ ಮಾಡಿದ್ದ ಸುಶೀಲ್ ಕೋಟಿ ಕೋಟಿ ಹಣವನ್ನ ನಗದಲ್ಲೇ ವ್ಯವಹಾರ ಮಾಡಿದ್ರು.
ಇವೆಲ್ಲವೂ ಕೂಡ ಬ್ಲಾಕ್ ಮನಿ ಅನ್ನೋ ಅನುಮಾನದಲ್ಲಿ ಫ್ರಿವೆನ್ಷನ್ ಮನಿಲಾಂಡ್ರಿಂಗ್ ಪ್ರಕರಣದ ಅಡಿ ಪ್ರಕರಣ ಮಾಡಲಾಗಿದೆ. ಇಷ್ಟು ಹಣ ಎಲ್ಲಿಂದು ಯಾವ ರೀತಿಯಲ್ಲಿ ಸಂಪಾದಿಸಿದ್ದು ಎನ್ನುವ ಬಗ್ಗೆ ಅನುಮಾನ ಮೂಡಿದ್ದು, ಅವೆಲ್ಲದರ ಬಗ್ಗೆ ಇಡಿ ಅಧಿಕಾರಿಗಳು ದಾಖಲೆ ಕೇಳಿದ್ದಾರೆ. ಆದರೆ ಆ ಹಣ ವರ್ಗಾವಣೆ ಬಗ್ಗೆ ದಾಖಲೆ ನೀಡುವಲ್ಲಿ ವಿಫಲರಾಗಿರೋ ಸುಶೀಲ್ ನ ಇಂದು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇ
ಇನ್ನೂ ಫ್ಲಾಟ್ ಕೊಡುವುದಾಗಿ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಿಸುವರರನ್ನ ವಿಚಾರಣೆಗೆ ಕರೆಯಲಿರುವ ಇಡಿ ಅಧಿಕಾರಿಗಳು ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಪರ್ಸಂಟೇಜ್ ಲೆಕ್ಕದಲ್ಲಿ ಕಮೀಷನ್ ನೀಡಲು ಅವಕಾಶ ಇಲ್ಲ. ಪರ್ಸಂಟೇಜ್ ಲೆಕ್ಕದಲ್ಲಿ ಕಮೀಷನ್ ನೀಡೋದು ಕಾನೂನು ಪ್ರಕಾರ ಅಪರಾಧ ಎಂದು ಅಭಿಪ್ರಾಯ ಪಟ್ಟಿದೆ. ಕೇವಲ ಕೋ ಅಪರೇಟೀವ್ ಸೊಸೈಟಿ ಅಥಾವ ಸಹಕಾರ ಸಂಘಗಳಿಗೆ ಮಾತ್ರ ಕಮೀಷನ್ ನೀಡಲು ಅವಕಾಶ.ಹಾಗಾಗಿ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸುಶೀಲ್ ಪಾಂಡುರಂಗನನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
PublicNext
25/06/2022 08:40 pm