ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಸುಲಿಗೆ, ದರೋಡೆ ಪ್ರಕರಣಗಳಿಗೆ ಎಗ್ಗಿಲ್ಲದೆ ನಡೆಯುತ್ತಿವೆ. ನಗರದ ಒಂದಲ್ಲ ಒಂದು ಕಡೆ ಕಿಡಿಗೇಡಿಗಳು ತಮ್ಮ ಕೈಚಳಕ ತೋರಿಸುತ್ತಿದ್ದು, ಜನರನ್ನ ಬೆಚ್ಚಿ ಬೀಳಿಸುತ್ತಿದೆ. ನಗರ ಕೆಲವೇ ಕೆಲವು ಪುಂಡರ ಈ ದುಷ್ಕೃತ್ಯಕ್ಕೆ ಸಿಲಿಕಾನ್ ಸಿಟಿ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ನಿನ್ನೆ ಬೆಳಗ್ಗೆ ಆಸ್ಟ್ರೇಲಿಯಾ ಪ್ರಜೆಗೆ ಸಹಾಯ ಮಾಡುವ ನೆಪದಲ್ಲಿ ಕಿಡಿಗೇಡಿಗಳು ಸುಲಿಗೆ ಮಾಡಿ ಬ್ಯಾಗ್, ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದಾರೆ.
ಆಸ್ಟ್ರೇಲಿಯಾ ಮೂಲದ ಪ್ರಜೆ ತನ್ನ ತವರಿನಲ್ಲಿ ಉದ್ಯಮ ನಡೆಸುತ್ತಿದ್ದು, ಎರಡು ಕಂಪನಿ ಸಿಇಓ ಕೂಡ ಆಗಿದ್ದ, ಉದ್ಯಮವನ್ನ ಬೇರೆಡೆ ವಿಸ್ತರಿಸಲು ನಗರಕ್ಕೆ ಬಂದಿದ್ದ ಆಸ್ಟ್ರೇಲಿಯಾ ಪ್ರಜೆ ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಉಳಿದು ಕೊಂಡಿದ್ರು. ಪ್ರತಿದಿನ ಕೆಲಸ ಮುಗಿಸಿ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದ ಈತ, ನಿನ್ನೆ ಬೆಳಗಿನ ಜಾವ 2.30 ರ ಸುಮಾರಿಗೆ ಎಂದಿನಂತೆ ಕೆಲಸ ಮುಗಿಸಿ ಹೋಟೆಲ್ ವಾಪಸ್ ಆಗಿದ್ದನಂತೆ. ಅದ್ರೆ ಈ ವೇಳೆ ಹೋಟೆಲ್ ಖಾಲಿ ಮಾಡಲು ಮುಂದಾಗಿದ್ದು, ಪೇಮೆಂಟ್ ವಿಚಾರದಲ್ಲಿ ಹೋಟೆಲ್ ಸಿಬ್ಬಂದಿ ಮತ್ತು ಆಸ್ಟ್ರೇಲಿಯಾ ಪ್ರಜೆ ನಡುವೆ ಗಲಾಟೆಯಾಗಿದೆ. ಹೋಟೆಲ್ ಸಿಬ್ಬಂದಿ ಕ್ಯಾಶ್ ಪೇಮೆಂಟ್ ಮಾಡಲು ತಿಳಿಸಿದ್ದಾರೆ, ಅದ್ರೆ ತನ್ನ ಬಳಿ ಕ್ಯಾಶ್ ಇಲ್ಲ ಆನ್‌ಲೈನ್ ಪೇಮೆಂಟ್ ಮಾಡುತ್ತೇನೆ ಎಂದಾಗ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ.
ಹೋಟೆಲ್ ಸಿಬ್ಬಂದಿ ಗಲಾಟೆ ಮುಗಿಸಿ ಆಸ್ಟ್ರೇಲಿಯಾ ಪ್ರಜೆ ಲಗೇಜ್ ಸಮೇತ ಹೊರಗಡೆ ಬಂದಿದ್ದಾರೆ. ಆಸ್ಟ್ರೇಲಿಯಾ ಪ್ರಜೆ ಗಲಾಟೆಯನ್ನೆ ನೋಡುತ್ತಿದ್ದ ಮೂರ್ನಾಲ್ಕು ಜನ ಕಿಡಿಗೇಡಿಗಳು, ಇದನ್ನೆ ಬಂಡವಾಳ ಮಾಡಿಕೊಂಡು ನಾವು ಪೊಲೀಸರ ಸಹಾಯ ಕೊಡಿಸುತ್ತೇವೆ ಎಂದು ತಮ್ಮ ಜೊತೆ ಬೈಕ್ ನಲ್ಲಿ ಕರೆದೊಯ್ದಿದ್ದಾರೆ. ಕೆಜಿ ಹಳ್ಳಿಯ ನಿರ್ಜನ ಪ್ರದೇಶಕ್ಕೆ ಆಸ್ಟ್ರೇಲಿಯಾ ಪ್ರಜೆಯನ್ನ ಕರೆದೊಯ್ದು ಚಾಕು ತೋರಿಸಿ ಮೊಬೈಲ್, ಬ್ಯಾಗ್ ಕಸಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಲ್ಲು ತೋರಿಸಿ ಆಸ್ಟ್ರೇಲಿಯಾ ಪ್ರಜೆ ಅಲ್ಲಿಂದ ಪಾರಾಗಿ ಬಂದು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿದ ಪೊಲೀಸರು ಓರ್ವ ಸೈಯದ್ ಇಮ್ರಾನ್ ಎಂಬ ಓರ್ವ ಸುಲಿಗೆಕೋರನನ್ನ ಬಂಧಿಸಿ ಉಳಿದವರಿಗೆ ಶೋಧ ನಡೆಸಿದ್ದಾರೆ.
Kshetra Samachara
25/06/2022 06:51 pm