ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ ಮಾರಾಟ ಮಾಡ್ತಿದ್ದ ವಿದೇಶಿ ಮಹಿಳೆ ಬಂಧನ

ಬೆಂಗಳೂರು: ರಸ್ತೆಯ ಬದಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬಳನ್ನು ಬಾಸವಾಡಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಂಧಿತ ವಿದೇಶಿ ಮಹಿಳೆಯಿಂದ ಸುಮಾರು 15 ಲಕ್ಷ ರೂ ಬೆಲೆ ಬಾಳುವ 13 ಗ್ರಾಂ ಎಂ.ಡಿ ಕ್ರಿಸ್ಟಲ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬಂತ ಆರೋಪಿ ತಾಂಜೇನಿಯಾ ದೇಶದ ಓಮರಿ ವೋ ಕೆಲ್ವಿನ್ ಜೇಮ್ಸ್ ಕಮ್ಮನಹಳ್ಳಿ ರಸ್ತೆಯ ಜಲವಾಯು ವಿಹಾರದ ಎದುರುಗಡೆ ಇರುವ ಕಾಫಿಡೇ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ಳು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಆಕೆಯನ್ನು ಬಂಧಿಸಿದ್ದಾರೆ. ಬಂತಳಿಂದ 15 ಲಕ್ಷ ರೂ ಬೆಲೆ ಬಾಳುವ 13 ಗ್ರಾಂ ಎಂ.ಡಿ ಕ್ರಿಸ್ಟಲ್ ಮಾದಕ ವಸ್ತು ಮತ್ತು ಒಂದು ಆಪಲ್ ಐಶೋನ ಮೊಬೈಲ್ ಫೋನನನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಆರೋಪಿತೆಯು ತಾಂಜಾನಿಯಾ ದೇಶದವಳಾದವಳಾಗಿದ್ದು ,ಟೂರಿಸ್ಟ್ ವೀಸಾದಲ್ಲಿ 2018 ರಲ್ಲಿ ಭಾರತಕ್ಕೆ ಬಂದ್ದಿದ್ದಾಳೆ. ಅ ನಂತರ ಇಲ್ಲಿಯೇ ಆಕ್ರಮವಾಗಿ ನೆಲೆಸಿ ಡ್ರಗ್ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದಳ್ಳು. ಈಕೆಯ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/06/2022 06:58 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ