ಬೆಂಗಳೂರು : ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿ ಪಾಲನಹಳ್ಳಿ ತೋಟದ ಮನೆಯಲ್ಲಿ ಅಕ್ರವಾಗಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಧೀಡಿರ್ ದಾಳಿ ನಡೆಸಿದ್ದಾರೆ.ಆಫ್ರಿಕಾ ಮೂಲದ ವಿದೇಶಿ ಪ್ರಜೆ ಜಾನ್ ಅಬ್ರಹಾಂನನ್ನು ಬಂಧಿಸಲಾಗಿದೆ. ಕಾಲೇಜ್ ವಿದ್ಯಾರ್ಥಿಗಳು ಮತ್ತು ಜನರಿಗೆ ಹಲವು ದಿನಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ.
ಇನ್ನು ಯಲಹಂಕ ಪೊಲೀಸರ ದಾಳಿ ವೇಳೆ ಬಾಡಿಗೆ ಮನೆಯಲ್ಲಿ 1.ಕೆ.ಜಿ.455 ಗ್ರಾಂ.MDMA, 7.6.ಕೆ.ಜಿ.ಗಾಂಜಾ, 28000 ನಗದು, 1ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಮುಂದುವರೆಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
10/06/2022 12:45 pm