ಬೆಂಗಳೂರು: ಹಣಕ್ಕಾಗಿ ಬಾಲಕನನ್ನು ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳನ್ನ ಪೊಲೀಸ್ರು ಸಿನಿಮಾ ಸ್ಟೈಲ್ ನಲ್ಲೆ ಪತ್ತೆ ಮಾಡಿದ್ದಾರೆ.ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹೆಣ್ಣೂರು ಪೊಲೀಸರು ರಾತ್ರೋ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ಗೌರವ್ ಸಿಂಗ್ ಬಂಧಿತ ಆರೋಪಿಯಾಗಿದ್ದು ಪ್ರಕರಣದಲ್ಲಿ ಆರೋಪಿಯ ಸಂಬಂಧಿಕಯಾಗಿರುವ ದುರ್ಗಾ ಹಾಗೂ ಮಂಗೀತಾ ಎಂಬುವರು ಭಾಗಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹೊರಮಾವಿನ ಆಗರದಲ್ಲಿ ವಾಸವಾಗಿದ್ದ ಸುಭಾಷ್ ಹಾಗೂ ಅಶ್ವಿನಿ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸುಭಾಷ್ ಬಿಎಂಟಿಸಿ ಬಸ್ ಚಾಲಕನಾಗಿದ್ದು ಈತನಿಗೆ ಇಬ್ಬರಿಗೆ ಮಕ್ಕಳಿದ್ದಾರೆ. ನಿನ್ನೆ ಸಂಜೆ ಮನೆ ಬಳಿ ಬಾಲಕ ಆಟವಾಡುವಾಗ ಮಂಗಿತಾ ಎಂಬ ಮಹಿಳೆ ಮೈನ್ ರೋಡ್ ವರೆಗೂ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿಂದ ದುರ್ಗಾ ಹೆಸರಿನ ಮಹಿಳೆ
ಸಿಮ್ಮಿಂಗ್ ಪುಲ್ ಹೋಗೋಣ ಬಾ ಎಂದು ಕರೆದುಕೊಂಡು ಹೋಗಿ ಆಟೋ ಮೂಲಕ ಜಿಗಣಿಯ ಸೀದಾ ಜಿಗಣಿ ಕಡೆ ಹೊರಟಿದ್ಳ. ಇಲ್ಲಿನ ಜೆ.ಆರ್.ಫಾರ್ಮ್ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಸಂಬಂಧಿಕ ಗೌರವ್ ಸಿಂಗ್ ಬಳಿ ಬಾಲಕನ ಒಪ್ಪಿಸಿ ಬಾಲಕನ ಪೋಷಕರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ರು.
ನಿರ್ಜನ ಪ್ರದೇಶವಾಗಿದ್ದರಿಂದ ಫಾರ್ಮ್ ಮಾಲೀಕ ಆರೋಪಿಯನ್ನ ಸೆಕ್ಯೂರಿಟಿ ಗಾರ್ಡ್ ಗೌರವ್ ನನ್ನಆಗಿ ನೇಮಿಸಿದ್ದರು. ಕಿಡ್ನ್ಯಾಪ್ ಮಾಡಿ ಬಾಲಕನನ್ನು ಒತ್ತೆಯಾಳುವನ್ನಾಗಿ ಮಾಡಿಕೊಂಡ ಗೌರವ್ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ. ಮಗನನ್ನು ಸುರಕ್ಷಿತವಾಗಿ ಬಿಡಬೇಕಾದರೆ 50 ಲಕ್ಷ ಕೊಡಬೇಕೆಂದು ಡಿಮ್ಯಾಂಡ್ ಮಾಡಿ ಕರೆ ಕಟ್ ಮಾಡಿದ್ದಾರೆ. ಆತಂಕಗೊಂಡ ಪೋಷಕರಿಗೆ ಹೆಣ್ಣೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಶೀಘ್ರ ಕಾರ್ಯಪ್ರವೃತ್ತರಾದ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡ ರಚಿಸಿ ಫೀಲ್ಡ್ ಗಿಳಿದಿದ್ದಾರೆ. ಒಂದು ತಂಡ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರೆ ಮತ್ತೊಂದು ತಂಡ ಕರೆ ಬಂದಿದ್ದ ಅಪಹರಣಕಾರರ ಜಾಡನ್ನು ಪತ್ತೆಗೆ ಮುಂದಾಗಿದ್ದರು. ಜಿಗಣಿ ಬಳಿಯ ಫಾರ್ಮ್ ಹೌಸ್ ನಲ್ಲಿ ಅಪಹರಣಕಾರರು ಇರುವ ಬಗ್ಗೆ ಮಾಹಿತಿ ಅರಿತ ಇನ್ಸಪೆಕ್ಟರ್ ವಸಂತ್ ಕುಮಾರ್ ಆ್ಯ್ಯಡ್ ಟೀಮ್ ಸ್ಥಳಕ್ಕೆ ದೌಡಾಯಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಾಲಕನನ್ನ ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
PublicNext
08/06/2022 06:40 pm