ಬೆಂಗಳೂರು: ಕಳ್ಳತನ ಅನ್ನೋದು ದಿನೇ ದಿನೆ ಫ್ಯಾಶನ್ ಆಗ್ಬಿಟಿದೆ! ಹಾಗೇ ಪೊಲೀಸ್ ನವರೂ ಶರವೇಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇವತ್ತಿನ ಸ್ಟೋರಿಯಲ್ಲಿ ಕೂಡ ರಾತ್ರಿ ಕಳ್ಳತನ ಮಾಡಿದ ಕಳ್ಳರನ್ನು ಬೆಳಗಾಗುವಷ್ಟರಲ್ಲಿ ಖಾಕಿ ಪಡೆ ಬಂಧಿಸಿದೆ.
ಹೌದು. ಕಗ್ಗಲಿಪುರ ಠಾಣೆ ವ್ಯಾಪ್ತಿಯ ಕೆಂಗೇರಿ ಹತ್ತಿರ ಅಗರ ಗ್ರಾಮವಿದೆ. ಅಲ್ಲೊಂದು ಕೆರೆ ಬಳಿ ಮಧ್ಯರಾತ್ರಿ 12 ಗಂಟೆಗೆ ಕಾರಿನಲ್ಲಿ ನಿಶ್ಚಲ್, ಶ್ರೀನಿವಾಸ್, ಅಜಯ್ ಕುಮಾರ್ ಬರುತ್ತಿರುತ್ತಾರೆ. ಆ ದಾರಿಯಲ್ಲೆ ಕಾದು ಕುಳಿತಿದ್ದ ಖದೀಮರು, ಕಾರು ಅಡ್ಡಗಟ್ಟಿ ಬಿಯರ್ ಬಾಟಲ್, ಚಾಕುವಿನಿಂದ ಬೆದರಿಸಿ ಕಾರು, ಮೊಬೈಲ್, ಹಣವನ್ನು ದರೋಡೆ ಮಾಡಿ ಪರಾರಿಯಾಗುತ್ತಾರೆ.
ಈ ಬಗ್ಗೆ ನಿಶ್ಚಲ್ ನೀಡಿದ ದೂರಿನಂತೆ ಕಗ್ಗಲಿಪುರ ಪೊಲೀಸರು ಕೇಸ್ ದಾಖಲಿಸಿಕೊಳ್ತಾರೆ. ನಂತರ ಇನ್ ಸ್ಪೆಕ್ಟರ್ ರಾಮಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಮುಂದುವರೆಸಿ ಆರೋಪಿಗಳಾದ ಶೇಷಾದ್ರಿ (25 ವರ್ಷ), ದೀಕ್ಷಿತ್ ಎಲ್. (18), ಅರುಣ್ (21), ಶ್ರೀನಾಥ್ ( 23), ನಿಖಿಲ್ (24) ಬಂಧಿಸಿ, 7,50,000 ಮೌಲ್ಯದ ಎರಡು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ನಗದನ್ನು ವಶ ಪಡಿಸಿದ್ದಾರೆ.
ವರದಿ: ರಂಜಿತಾ ಸುನಿಲ್, ಬೆಂಗಳೂರು
PublicNext
31/05/2022 10:12 pm