ಬೆಂಗಳೂರು: ಇಸ್ಪೀಟ್ ಅಡ್ಡೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಆನೇಕಲ್ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 9,480ರೂ ನಗದು ಮತ್ತು ಬೈಕ್‌ಗಳನ್ನ ವಶಪಡಿಸಿಕೊಂಡಿದ್ದಾರೆ.
ಆನೇಕಲ್ ತಾಲೂಕಿನ ವಣಕನಹಳ್ಳಿ-ಸೋಲೂರು ಗ್ರಾಮಗಳ ಮದ್ಯೆ ಇರುವ ಕಾಡಿನಲ್ಲಿ ಇಸ್ಪೀಟ್ ಅಡ್ಡೆಯಲ್ಲಿ ಭಾಗಿಯಾಗಿದ್ದ ವಣಕನಹಳ್ಳಿಯ ಗಿರೀಶ, ಪ್ರಕಾಶ್, ರಾಜಪ್ಪ, ಹರೀಶ ಮತ್ತು ಕೇಶವಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಆನೇಕಲ್ ವೃತ್ತ ನಿರೀಕ್ಷಕ ಹೆಚ್.ಕೆ ಮಹಾನಂದ್ ಎಸ್ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದರು.
Kshetra Samachara
25/05/2022 11:20 pm