ಬೆಂಗಳೂರು:ಕೊಲೆಗಾರನೊಬ್ಬ ಸೆಲ್ಫೀ ತೆಗೆದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರು ನಿವಾಸಿ ಮಧುಸೂದನ್ @ ಮಧು ಸೇರಿ ಏಳು ಆರೋಪಿಗಳು 2014ರ ಮಾರ್ಚ್ ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ್ ರಾಜ್ ಸಿಂಗ್ ಅವರನ್ನು ಕೊಲೆ ಮಾಡಿ ಕೋಟಿ ಕೋಟಿಮೌಲ್ಯದ ವಜ್ರವನ್ನ ದರೋಡೆ ಮಾಡಿದ್ರು.
ಆನ್ ಲೈನ್ ನಲ್ಲಿ ಉದಯ್ ರಾಜ್ ಸಿಂಗ್ ತಮ್ಮ ಬಳಿ ಡೈಮಂಡ್ ನೆಕ್‌ಲೇಸ್ ಮಾರುವುದಾಗಿ ಹಾಕಿದ್ದ ಜಾಹೀರಾತು ಗಮನಿಸಿದ ಮಧು ,ವಜ್ರದ ಹಾರ ಕೊಳ್ಳುವ ನೆಪದಲ್ಲಿ ಮಧು ಮತ್ತವನ ಸಹಚರರು ಸಿಂಗ್ ಮನೆಗೆ ಹೋಗಿ ಉದಯ್ ನ ಕೊಲೆಮಾಡಿ ಪತ್ನಿಗೂ ಇರಿದು ಆಭರಣ ಸಮೇತ ಎಸ್ಕೇಪ್ ಆಗಿದ್ರು.
ಈ ಕೇಸ್ ನಲ್ಲಿ ಜೈಲು ಸೇರಿದ್ದ ಮಧು ಅಂಡ್ ಟೀಂ 2017 ರಲ್ಲಿ ಜಾಮೀನು ಪಡೆದು ಎಸ್ಕೇಪ್ ಆಗಿದ್ದ. ಈಕೇಸ್ ನಲ್ಲಿ ಕೊರ್ಟ್ 2019ರಲ್ಲಿ ಆರೋಪಿಗಳು ಪಾತಕಕೃತ್ಯ ಸಾಬೀತಾಗಿ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿತ್ತು. ಆದರೆ, ಮಧುಸೂದನ್ ಮಾತ್ರ ನಾಪತ್ತೆಯಾಗಿ ಪೊಲೀಸರಿಗೆ ತಲೆನೋವಾಗಿದ್ದ.
ಮೊನ್ನೆ ಮೊನ್ನೆ ಮಧುಸೂದನ್ ತನ್ನ ಸ್ನೇಹಿತನೊಂದಿಗೆ ತೆಗೆಸಿಕೊಂಡ ಸೆಲ್ಫಿ ಫೋಟೊ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಆಗಂತುಕ ವ್ಯಕ್ತಿಯೊಬ್ಬರು ಆಡುಗೋಡಿ ಠಾಣೆಗೆ ಹೋಗಿ ಮಧು ಫೋಟೋ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ರು. ಪೊಲೀಸರು ಆ ಫೋಟೋದಲ್ಲಿರುವುದು ಮಧುವೇ ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿತ್ತೆ ಜೈಲಿಗೆ ಕಳುಹಿಸಿದ್ದಾರೆ.
ಹೆಸರು ಬದಲಾಯಿಸಿಕೊಂಡು ಪಟ್ನಾ, ಪುಣೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಮಧು, ಇತ್ತೀಚೆಗಷ್ಟೇ ತನ್ನ ಸ್ನೆಹಿತನ ಜೊತೆ ಪೀಣ್ಯ ಬಳಿಯ ಮಾಲ್‌ವೊಂದಕ್ಕೆ ಹೋಗಿದ್ದಾಗ ಸೆಲ್ಫೀ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ.
Kshetra Samachara
25/05/2022 08:42 pm