ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಮೂವರು ಪ್ರೊಫೆಷನಲ್ ಮನೆಗಳ್ಳರು ಅಂದರ್: ಬಂಧಿತರಿಂದ 9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಯಲಹಂಕ: ಇವರು ಅಂತಿಂಥಾ ಆಸಾಮಿಗಳಲ್ಲ. ಒಬ್ಬೊಬ್ಬರ ಮೇಲೂ 20 ರಿಂದ 26 ಮನೆಗಳ್ಳತನ‌ದ ಕೇಸ್ಗಳು ದಾಖಲಾಗಿವೆ ಅಂದ್ರೆ ನೀವೆ ಊಹಿಸಿ ಇವರೆಂತಾ ಕಳ್ಳರು ಅಂತ. ಹೌದು ಇಂತಹ ಖದೀಮರಿಗೆ ಕೋಳ ತೊಡಿಸಿರುವ ವಿದ್ಯಾರಣ್ಯಪುರ ಪೊಲೀಸ್ರು ಇವರಿಂದ 9 ಲಕ್ಷಕ್ಕೂ ಅಧಿಕ ಬೆಲೆಯ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ವಿದ್ಯಾರಣ್ಯಪುರ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆ ಮನೆಗಳ್ಳತನ ಮಾಡ್ತಿದ್ದ 3 ಜನರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ @ ಕರಾಟೆ ಸೀನ, ಸತೀಶ್ ಕುಮಾರ್ @ ಕೊಕ್ರೆ ಸತೀಶ, ರಾಜಣ್ಣ @ ಕರಡಿ ರಾಜ ಬಂಧಿತರು. ಸದ್ಯ ಕೊಡಿಗೇಹಳ್ಳಿಯ 1 & ವಿದ್ಯಾರಣ್ಯಪುರದ 2 ಕೇಸ್ಗಳಿಂದ 9 ಲಕ್ಷಕ್ಕೂ ಅಧಿಕ ಬೆಲೆಯ 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇವ್ರು ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಕನ್ನ ಹಾಕ್ತಿದ್ರು. ಸದ್ಯ ಈ ಖದೀಮರನ್ನ ವಿದ್ಯಾರಣ್ಯಪುರ ಪೊಲೀಸರು ಜೈಲಿಗಟ್ಟಿದ್ದಾರೆ.

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ.

Edited By : Nagesh Gaonkar
PublicNext

PublicNext

21/05/2022 10:32 pm

Cinque Terre

40.4 K

Cinque Terre

0

ಸಂಬಂಧಿತ ಸುದ್ದಿ