ನೆಲಮಂಗಲ: ಗ್ರಾಮವೊಂದ್ರಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರದ ಚಿಲ್ಲರೆ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಆದ್ರೆ ಅಂಗಡಿಯಲ್ಲಿ ವ್ಯಾಪಾರ ಆಗ್ತಿಲ್ಲ. ನೀವು ನಮ್ಮ ಅಂಗಡಿಗೆ ಬರೋ ಗ್ರಾಹಕರನ್ನ ಸೆಳೆದು ವ್ಯಾಪಾರ ಹಾಳು ಮಾಡ್ತೀರ ಎಂಬ ಚಿಲ್ಲರೆ ವಿಷಯಕ್ಕೆ ಕುಡಿದ ಅಮಲಲ್ಲಿ, ಪಕ್ಕದ ಅಂಗಡಿಯವನಿಗೆ ಮಚ್ಚಿಂದ ಆತನ ಕಾಲನ್ನೆ ಕತ್ತರಿಸಿ ಎಸ್ಕೇಪ್ ಆಗಿದ್ದ ಆರೋಪಿ, ಈಗ ಪೊಲೀಸರ ಅತಿಥಿಯಾದ ಘಟನೆ ನೆಡೆದಿದೆ.
ಹೌದು. ಈ ಘಟನೆ ನಡೆದದ್ದು, ನೆಲಮಂಗಲ ತಾಲೂಕು ಹಾಲೇನಹಳ್ಳಿ ಗ್ರಾಮದಲ್ಲಿ. ಹೀಗೆ ಕಾಲು ತುಂಡಾಗಿ ಆಸ್ಪತ್ರೆ ಬೆಡ್ ಮೇಲೆ ಟ್ರೀಟ್ಮೆಂಟ್ ಪಡೆಯುತ್ತಿರೋ ವ್ಯಕ್ತಿ ಹೆಸ್ರು ಮೃತ್ಯುಂಜಯ 47 ವರ್ಷ. ಮೂಲತಃ ನೆಲಮಂಗಲ ತಾಲೂಕಿನ ಹಾಲೇನಹಳ್ಳಿ ಗ್ರಾಮದ ನಿವಾಸಿ, ಹ್ಯಾಗೋ ವ್ಯವಸಾಯ ಮಾಡ್ಕೊಂಡು ಜೀವನ ಮಾಡ್ತಿದ್ದ. ಇದೇ ಹಾಲೇನಹಳ್ಳಿ ಗ್ರಾಮದಲ್ಲಿ ಜಯರಾಮ ಎಂಬುವನ ತಂದೆ ರಮೇಶ್ ಅನ್ನೋರು ಚಿಲ್ಲರೆ ಅಂಗಡಿ ಇಟ್ಕೊಂಡಿದ್ರು. ಅದೇ ಅಂಗಡಿ ಪಕ್ಕದಲ್ಲೇ ಅಪಘಾತದಲ್ಲಿ ಕಾಲು ಕಳೆದು ಕೊಂಡಿದ್ದ ಮೃತ್ಯುಂಜಯ ತಮ್ಮ ಕೃಷ್ಣ ಮೂರ್ತಿಗೆ ಅಂಗಡಿ ಇಟ್ಕೊಟ್ಟಿದ್ದ ಅಷ್ಟೇ ನೋಡಿ. ನೀವು ನಮ್ಮ ಅಂಗಡಿ ಪಕ್ಕದಲ್ಲಿ ಅಂಗಡಿ ಇಟ್ಟ ಮೇಲೆ ನಮಗೆ ವ್ಯಾಪಾರ ಆಗ್ತಿಲ್ಲ ಅನ್ನೋ ಕ್ಷುಲಕ ಕಾರಣಕ್ಕೆ ಜಯರಾಮ ಆಗಾಗ ಜಗಳ ತೆಗೆಯುತ್ತಿದ್ನಂತೆ.
ಆದ್ರೆ ಕಳೆದ ದಿನ ರಾತ್ರಿ ಅದೇ ವಿಚಾರಕ್ಕೆ ಕಂಠ ಪೂರ್ತಿ ಮದ್ಯ ಸೇವಿಸಿದ ಜಯರಾಮ, ಮೃತ್ಯುಂಜಯ ಮನೆ ಬಳಿ ತೆರಳಿ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಮೃತ್ಯುಂಜಯ ಕಾಲನ್ನೆ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಗಂಭೀರ ಗಾಯಗೊಂಡ ರಕ್ತದ ಮಡುವಿನಲ್ಲಿ ನರಳಾಡ್ತಿದ್ದ ಮೃತ್ಯುಂಜಯನನ್ನ ಆತನ ಕುಟುಂಬಸ್ಥರು ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ಮೃತ್ಯುಂಜಯ ಕುಟುಂಬಸ್ಥರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಸದ್ಯ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡ ಆರೋಪಿ ಜಯರಾಮನನ್ನು ಬಂಧಿಸಿದ್ದು, ಈತ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಒಟ್ಟಾರೆ ಇಂತಹ ಕ್ಷುಲಕ ವಿಚಾರಕ್ಕೆ ನಡೆಯೋ ಚಿಲ್ಲರೆ ಜಗಳ, ಪ್ರಾಣ ತೆಗೆಯೋ ಹಂತಕ್ಕೆ ತಲುಪೋದು ನಿಜಕ್ಕೂ ವಿಪರ್ಯಾಸವೇ ಸರಿ.
PublicNext
19/05/2022 09:14 am