ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ನೇಹಿತರ ಜೊತೆ ಸೇರಿ ಬೈಕ್, ಮೊಬೈಲ್ ಕದಿಯುತ್ತಿದ್ದ ಖದೀಮರು ಅಂದರ್

ಯಲಹಂಕ: ಅವರು ಬಾಲ್ಯ ಸ್ನೇಹಿತರು. ಒಟ್ಟಿಗೆ ಆಟ ಆಡಿದವರು. ಒಟ್ಟಿಗೆ ಬೆಳೆದವರು. ಹೀಗಿದ್ದವರು ಇದ್ದಕ್ಕಿದ್ದಂತೆ ಕಳ್ಳತನದ ಹಾದಿ ಹಿಡಿದಿದರು. ಬೆಳೆಯುತ್ತಾ ಬೆಳೆಯುತ್ತಾ ಕ್ರಿಮಿನಲ್‌ಗಳಾಗಿಬಿಟ್ಟರು. ಮೊಬೈಲ್ ಕದ್ದು ಖಾಕಿ ಕೈಗೆ ತಗ್ಲಾಕ್ಕೊಂಡವ್ರು ಜೈಲು ಪಾಲಾಗಿದ್ದಾರೆ.

ಈ 2 ಸಿಸಿಟಿವಿ ದೃಶ್ಯ ನೋಡಿ. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿರೊ ಯುವತಿಯ ಕೈಲ್ಲಿದ್ದ ಮೊಬೈಲ್ ಕ್ಷಣಾರ್ಧದಲ್ಲಿ ಮಾಯ. ಬೈಕ್‌ನಲ್ಲಿ ಬರೋ ಆಸಾಮಿಗಳು ಯುವಕನ ಮೊಬೈಲ್ ಕಿತ್ತು ಹೇಗೆ ಪರಾರಿಯಾಗ್ತಾರೆ ನೋಡಿ. ಈ ಕ್ರಮಿಗಳ ಹಿನ್ನೆಲೆ ಕೇಳಿದ್ರೆ ನೀವೆ ಬೆಚ್ಚಿಬೀಳ್ತೀರಾ.

ಈ ಫೋಟೋದಲ್ಲಿ ಕಾಣ್ತಿರೊ ಯುವಕ A-1 ಆರೋಪಿಯ ಹೆಸರು ದರ್ಶನ್ 21 ವರ್ಷ. ಇನ್ನು ಇವ್ನು A-2 ಆರೋಪಿ ಜಾರ್ಜ್ 20 ವರ್ಷ. ಹಾಗೆಯೇ ಈತ A-3 ಆರೋಪಿ ದಿನೇಶ್ 23 ವರ್ಷ. ಮೂವರು ಕೂಡ ವಿದ್ಯಾರಣ್ಯಪುರದವರು. ಬಾಲ್ಯದಿಂದಲೇ ಒಟ್ಟೊಟ್ಟಿಗೆ ಬೆಳೆದವರು. ಚನ್ನಾಗಿ ಓದಿದ್ರೆ ಮೂವರು ಒಳ್ಳೆ ಕೆಲಸಕ್ಕೆ ಸೇರಿ ಮಾದರಿಯಾಗ್ತಿದ್ರೋ ಏನೋ. ಆದರೆ ಅಡ್ಡದಾರಿ ಹಿಡಿದು ಕ್ರಮಿನಲ್‌ಗಳಾಗಿಬಿಟ್ಟಿದ್ದಾರೆ.

ಅಷ್ಟಕ್ಕೂ ಆಗಿದ್ದೇನಂದರೆ ದರ್ಶನ್ ಬಾಲ್ಯದಲ್ಲಿದ್ದಾಗ್ಲೆ ಆತನ ತಂದೆ ತಾಯಿ ತೀರಿಕೊಂಡಿದ್ದರು. ಕಷ್ಟದಲ್ಲಿದ್ದವನು ವಿಲಾಸಿ ಜೀವನ ಮಾಡುವ ಹುಚ್ಚಿಗೆ ಬಿದ್ದಿದ್ದ. ಬಾಲ್ಯದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡ್ತಿದ್ದವರು, ಬೆಳೆಯುತ್ತಾ ಬೆಳೆಯುತ್ತಾ ಬೈಕ್ ಕಳ್ಳತನಕ್ಕೆ ಇಳಿದುಬಿಟ್ಟಿದ್ರು. 2019ರಲ್ಲಿ ಯಲಹಂಕ ನ್ಯೂಟೌನ್ ಪೊಲೀಸರು ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲಿನಿಂದ ಹೊರ ಬಂದು ಸ್ನೇಹಿತರ ಬೈಕ್ ಪಡೆದು ಮೊಬೈಲ್ ಸ್ನಾಚಿಂಗ್ ಮಾಡೋಕೆ ಶುರು ಮಾಡಿದ್ರು. ಅದೇ ರೀತಿ ಯುವಕನೊಬ್ಬನ ಮೊಬೈಲ್ ಸ್ನಾಚ್ ಮಾಡೋ ಸಿಸಿಟಿವಿ ವಿಡಿಯೋವನ್ನು ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ‌ ಶೇರ್ ಮಾಡಿದ್ರು. ತನಿಖೆಗೆ ಇಳಿದ ಈಶಾನ್ಯ ವಿಭಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಯಲಹಂಕ ನ್ಯೂ ಟೌನ್, ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಲಿ ಕಳ್ಳತನ ಮಾಡಿರೋದು ಗೊತ್ತಾಗಿದೆ.

ಸದ್ಯ ಬಂಧಿತ ಆರೋಪಿಗಳಿಂದ 1.5ಲಕ್ಷ ಮೌಲ್ಯದ 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಯಂಗ್ ಚೋರರಿಂದ ತೊಂದರೆಗೊಳಗಾದವರು ಇನ್ನು‌ಇರಬಹುದೇ ಎಂಬ ಆಯಾಯಮಗಳಲ್ಲಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಲಾಗಿದೆ.

SureshBabu Public Next..ಯಲಹಂಕ

Edited By : Manjunath H D
PublicNext

PublicNext

16/05/2022 09:59 pm

Cinque Terre

45.7 K

Cinque Terre

0

ಸಂಬಂಧಿತ ಸುದ್ದಿ