ಬೆಂಗಳೂರು: ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ಸೇರಿದ್ದ ಮಹಿಳೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ಪತಿಯ ಕಿರುಕುಳ ಅಂತ ಮಹಿಳೆ ಪೋಷಕರು ಅರೋಪಿಸಿದ್ದಾರೆ.
ಶಾಜಿಯಾ ಬಾನು ಮೃತ ಮಹಿಳೆಯಾಗಿದ್ದು ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ಪತಿ ಇಮ್ರಾನ್ ಖಾನ್ ಜೊತೆ ಶಾಜಿಯಾ ಬಾನು ಪತಿ ವಾಸವಾಗಿದ್ದಳು. ಆದರೆ ಹೆಂಡತಿ ಕಪ್ಪು, ದಪ್ಪಗಿದ್ದಾಳೆ ಅಂತಾ ಇಮ್ರಾನ್ ಕಿರುಕುಳ ನೀಡುತ್ತಿದ್ದ ಎಂದು ಶಾಜಿಯಾ ಸಂಬಂಧಿಕರು ಆರೋಪಿಸಿದ್ದಾರೆ.
ಗಂಡನ ಕಿರುಕುಳಕ್ಕೆ ಬೇಸತ್ತು ಶಾಜಿಯಾ ಬಾನು ಏಪ್ರಿಲ್ 20ರಂದು ಸ್ಯಾನಿಟೈಸರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಶಾಜಿಯಾ ಕೊನೆಯುಸಿರೆಳೆದಿದ್ದಾಳೆ. ಮಗಳ ಜೊತೆ ಸದಾ ಜಗಳ ಮಾಡುತ್ತಿದ್ದ ಇಮ್ರಾನ್ ತಾನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂದು ಶಾಜಿಯಾ ಪೋಷಕರು ಆರೋಪಿಸಿದ್ದು ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
11/05/2022 09:32 pm