ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಲೆಗೆ ಇಟ್ಟಿಗೆ ಏಟು... ಪ್ರಾಣ ಬಿಟ್ಟ ಯುವಕ; "ಕುಡಿದ ಮತ್ತಿನಲ್ಲಿ ಕೊಲೆ ಮಾಡಿಯೇ ಬಿಟ್ಟ!"

ಯಲಹಂಕ: ಯಲಹಂಕ ಉಪನಗರದ ಅಟ್ಟೂರು ಲೇಔಟ್ ನಲ್ಲಿ ಕ್ಷುಲ್ಲಕ ಕಾರಣದ ಯುವಕರಿಬ್ಬರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬಾಲಕೃಷ್ಣ ಹಾಗೂ ರವಿಕಿರಣ್ ಪರಿಚಿತರು‌. ಈ ಇಬ್ಬರ ಮಧ್ಯೆ ಏಪ್ರಿಲ್ 25ರ ರಾತ್ರಿ 11 ಗಂಟೆ ಸುಮಾರಿಗೆ ಜಗಳವಾಗಿದ್ದು, ಬಾಲಕೃಷ್ಣ ಸಿಮೆಂಟ್ ಇಟ್ಟಿಗೆಯಿಂದ ರವಿಕಿರಣ್ ತಲೆಗೆ ಗಂಭೀರವಾಗಿ ಹೊಡೆದಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ, ರವಿಕಿರಣ್(27) ನಿನ್ನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ

ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಕೇಸು ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿತ್ತು.

ಆರೋಪಿ ಬಾಲ ಅಲಿಯಾಸ್ ಬಾಲಕೃಷ್ಣ ಕುಡಿದಿದ್ದು, ಬೀಡಾ ಅಂಗಡಿಗೆ ಹೋದಾಗ ಅಲ್ಲೇ ಇದ್ದ ರವಿಕಿರಣ್‌ ಗೆ ಬೈದಿದ್ದಾನೆ. ಇದು ಜಗಳಕ್ಕೆ ಕಾರಣವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.

ಬದುಕಿ ಬಾಳಬೇಕಿದ್ದ ಯುವಕರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಹತ್ಯೆಯಲ್ಲಿ ಅಂತ್ಯವಾಗಿದೆ. ಕಾರು ಚಾಲಕನಾಗಿ, ಪೇಂಟರ್ ಕೂಡ ಆಗಿದ್ದ ರವಿಕಿರಣ್‌ ನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದ್ದರೆ, ಕೆಲಸ ಇಲ್ಲದೆ ಅಡ್ಡಾದಿಡ್ಡಿ ತಿರುಗಾಡಿಕೊಂಡಿದ್ದ ಕೊಲೆ ಆರೋಪಿ ಬಾಲಕೃಷ್ಣ ಜೈಲು ಪಾಲಾಗಿದ್ದಾನೆ.

- SureshBabu Public Next ಯಲಹಂಕ

Edited By : Nagesh Gaonkar
PublicNext

PublicNext

08/05/2022 05:33 pm

Cinque Terre

35.42 K

Cinque Terre

0

ಸಂಬಂಧಿತ ಸುದ್ದಿ