ನೆಲಮಂಗಲ: ಕ್ಷೌರ ಮಾಡಿದ ಕೂಲಿ ಕೇಳಿದ ವಿಚಾರಕ್ಕೆ ಯುವಕರಿಬ್ಬರು ಕ್ಷೌರಿಕನಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರ ಅರಿಶಿನಕುಂಟೆಯ ಗೆಜ್ಜಗದಹಳ್ಳಿ ರಸ್ತೆಯಲ್ಲಿ ನೆಡೆದಿದೆ.
ಮಾಲೀಕ ಜಾಕೀರ್ ಮಿಯಾ ಎಂಬುವನಿಗೆ ಸೇರಿದ ಫಕೀಜಾ ಹೇರ್ ಕಟಿಂಗ್ ಸಲೂನ್‌ನಲ್ಲಿ ಯತೀಶ್ ಎಂಬಾತ ಹೇರ್ ಕಟ್ಟಿಂಗ್ ಮಾಡಿಸಿ ಕೊಂಡಿದ್ದ. ಅದರ ಕೂಲಿ ಕೇಳಿದ ಸುನೀಲ್ ಠಾಕೂರ್ ಎಂಬ ಕ್ಷೌರಿಕನಿಗೆ ಯತೀಶ ನನಗೆ ದುಡ್ಡು ಕೇಳ್ತೀಯಾ? ನನ್ನ ಯಾರು ಅಂದ್ಕೊಂಡಿದ್ದೀಯಾ?, ನಿನಗೆ ಬುದ್ದಿ ಕಲಿಸ್ತೀನೆಂದು ಹೇಳಿ ಹೋಗಿದ್ದಾನೆ.
ಮತ್ತೆ ಅಂಗಡಿಯಲ್ಲಿ ಗ್ರಾಹಕರು ಇಲ್ಲದ ವೇಳೆ ಯತೀಶ, ಅಭಿ ಎಂಬಾತನನ್ನು ಕರೆತಂದು ಸುನಿಲ್ ಮುಖಕ್ಕೆ ಖಾರದ ಪುಡಿ ಎರಚಿ, ಎದೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿ ಆಗಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ 35 ವರ್ಷದ ಕ್ಷೌರಿಕ ಸುನಿಲ್ ಠಾಕೂರ್‌ನನ್ನು ಕೂಡಲೇ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿಲಾಗಿದ್ದು, ಅದೃಷ್ಟವಶಾತ್ ಸುನೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಸದ್ಯ ಚಾಕು ಇರಿದು ತಲೆ ಮರೆಸಿಕೊಂಡಿದ್ದ ಯರೀಶ್ ಮತ್ತು ಅಭಿಯನ್ನ ಬಂಧಿಸಿರೋ ನೆಲಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
06/05/2022 01:23 pm