ದೊಡ್ಡಬಳ್ಳಾಪುರ: ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗುತ್ತಿತ್ತು. ಇದರಿಂದ ಬೇಸತ್ತ ಮದ್ಯ ವ್ಯಸನಿಯೋರ್ವ ಟ್ರಾನ್ಸ್‌ಫಾರ್ಮರ್ ಕಂಬ ಏರಿ ಹೈಡ್ರಾಮಾ ನಡೆಸಿದ.
ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಬುಧವಾರ (ನಿನ್ನೆ) ರಾತ್ರಿ ಘಟನೆ ನಡೆದಿದ್ದು, ಗ್ರಾಮದ 45 ವರ್ಷದ ವ್ಯಕ್ತಿಯೊಬ್ಬ 11 ಕೆವಿ ವಿದ್ಯುತ್ ಟ್ರಾನ್ಸ್ ಫಾರ್ಮ್ ಕಂಬ ಏರಿ ಹೈಡ್ರಾಮಾ ನಡೆಸಿದ್ದಾನೆ. ತಕ್ಷಣವೇ ಅದೇ ಮಾರ್ಗದಲ್ಲಿ ಹಾದು ಹೋದ ಪವರ್ ಮ್ಯಾನ್‌ಗೆ ವಿಷಯ ತಿಳಿದು ವಿದ್ಯುತ್ ಸಂಪರ್ಕ ಕಡಿತ ಮಾಡಿ ಪಡೆಯಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.
ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತವಾಗುತ್ತಿದದ್ದು ಮತ್ತು ಹೆಂಡತಿ ಬಿಟ್ಟು ಹೋಗಿದ್ದರಿಂದ ಸಂಸಾರಿಕ ಜೀವನದಲ್ಲಿ ಬೇಸತ್ತಿದ್ದ ಆತ ಟ್ರಾನ್ಸ್‌ಫಾರ್ಮರ್ ಕಂಬ ಏರಿ ಸ್ಥಳದಲ್ಲಿ ಹೈಡ್ರಾಮಾ ಸೃಷ್ಠಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಆತನನ್ನು ಟ್ರಾನ್ಸ್‌ಫಾರ್ಮರ್ ಕಂಬದಿಂದ ಕೆಳಗಿಸಲು ಯಶಸ್ವಿಯಾಗಿದ್ದಾರೆ.
Kshetra Samachara
05/05/2022 09:53 am