ಆನೇಕಲ್ :ಪೊಲೀಸರು ಎಷ್ಟೇ ನಿಗಾ ವಹಿಸಿದ್ರು ವ್ಹೀಲಿಂಗ್ ಪುಂಡರ ಹಾವಳಿಗೆ ಲಗಾಮು ಹಾಕಲು ಸಾಧ್ಯವಾಗುತ್ತಿಲ್ಲ.ಹೌದು ಬೆಂಗಳೂರು- ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುವಾಗ ಯುವಕರು ಡಿಯೋ ಬೈಕ್ ನಲ್ಲಿ ನಡುರಸ್ತೆಯಲ್ಲೇ ವ್ಹೀಲಿಂಗ್ ಮಾಡುವುದು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.
ಇನ್ನು ವ್ಹೀಲಿಂಗ್ ಮಾಡುತ್ತಿರುವ ದೃಶ್ಯಾವಳಿ ಗಳನ್ನು ಕಾರಿನಲ್ಲಿದ್ದವರು ಸೆರೆಹಿಡಿದಿದ್ದಾರೆ. ವಾಹನದಟ್ಟನೆ ಕಡಿಮೆ ಇರುವ ಜಾಗದಲ್ಲಿ ಹಾಗೂ ರಜೆ ದಿನಗಳಲ್ಲಿ ಪುಂಡರು ವ್ಹೀಲಿಂಗ್ ಮಾಡುತಿದ್ದಾರೆ ಅದರಲ್ಲೂ ಪೊಲೀಸರಿಗೆ ತಿಳಿಯಬಾರದೆಂದು ನಂಬರ್ ಪ್ಲೇಟ್ ಕಳಚಿ ವ್ಹೀಲಿಂಗ್ ಮಾಡುತ್ತಿದ್ದಾರೆ .
ಅಪಾಯಕಾರಿ ಸ್ಟಟ್ ಎಂದು ತಿಳಿದಿದ್ದರೂ ಸಹ ಯುವಕರು ವ್ಹೀಲಿಂಗ್ ಕ್ರೇಜ್ ಗೆ ಮುಂದಾಗಿದ್ದಾರೆ ಇದನ್ನೇಲ್ಲಾ ನೋಡಿದ ಪೊಲೀಸರು ವ್ಹೀಲಿಂಗ್ ಪುಂಡರ ಹಾವಳಿಗೆ ಬ್ರೇಕ್ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
PublicNext
04/05/2022 10:08 pm