ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಎಎಸ್ ಅಧಿಕಾರಿಗಳ ನಕಲಿ ಸಹಿ ಮಾಡಿ 2.35 ಕೋಟಿ ರೂ. ಲೂಟಿಗೆ ಪ್ಲಾನ್

ಬೆಂಗಳೂರು: ಫೋರ್ಜರಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಯತ್ನಿಸಿ ಕೆಎಎಸ್ ಅಧಿಕಾರಿಗಳಿಗೆ ಬೆದರಿಸಿದ್ದ ಆರೋಪದಡಿ ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರ ಪೋರ್ಜರಿ ಸಹಿ ಮಾಡಿ ಹಣ ಕಬಳಿಸಲು ಯತ್ನಿಸಿದ್ದ ಆರೋಪದಡಿ ಪರಾರಿಯಾಗಿರುವ ರವಿಕುಮಾರ್ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸರ್ಕಾರದ ಉದ್ಯಮಶೀಲ ಯೋಜನೆಯಡಿ ಸಾಲ ಸೌಲಭ್ಯ ಕೋರಿ ಭೋವಿ ನಿಗಮಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪೈಕಿ ನಕಲಿ ಜಾತಿ ಪತ್ರ ಹಾಗೂ ಅಂಕಪಟ್ಟಿ ಸಲ್ಲಿಸಿದ್ದ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು.

ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಯಪುರ, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿ ವಿವಿಧ‌ ಜಿಲ್ಲೆಗಳಿಂದ ಬಂದಿದ್ದ ಅರ್ಜಿಗಳ ಪೈಕಿ‌ 60 ಮಂದಿ‌ ಫಲಾಪೇಕ್ಷಿಗಳ ಅರ್ಜಿಗಳಿಗೆ ವ್ಯವಸ್ಥಾಪಕಿ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಸಹಿಗಳನ್ನ ಪೋರ್ಜರಿ ಮಾಡಿ ಮಂಜೂರಾತಿಗೆ ಸಲ್ಲಿಸಿದ್ದ. ಅಲ್ಲದೆ ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಚೆಕ್ ಗಳು ಕಳೆದ ಮಾರ್ಚ್ ನಲ್ಲಿ ಕಳುವಾಗಿತ್ತು. ಈ ಬಗ್ಗೆ ಐಸಿಐಸಿಐ ಬ್ಯಾಂಕ್‌ಗೆ ಭೋವಿ ನಿಗಮ ದೂರು ನೀಡಿತ್ತು.‌ ಕಳುವಾಗಿದ್ದ ಚೆಕ್ ಬಳಸಿ ರಾಯಚೂರು ಜಿಲ್ಲೆಗೆ 52 ಲಕ್ಷ ರೂ. ಜಮಾ ಮಾಡಿರುವ ಆರೋಪ ರವಿಕುಮಾರ್ ವಿರುದ್ಧ ಕೇಳಿ ಬಂದಿತ್ತು. ಇತ್ತೀಚೆಗೆ ನಡೆದ ಭೋವಿ ಅಭಿವೃದ್ದಿ ನಿಗಮ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರವಿಕುಮಾರ್ ಅಕ್ರಮ ಬೆಳಕಿಗೆ ಬಂದಿತ್ತು. ರವಿಕುಮಾರ್ ಅಕ್ರಮದ ಬಗ್ಗೆ ಪ್ರಶ್ನಿಸಲು ಮುಂದಾದ ಕೆಎಎಸ್ ಅಧಿಕಾರಿಗಳಿಗೆ ರವಿ ಧಮ್ಕಿ ಹಾಕಿದ್ದ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Edited By : Manjunath H D
PublicNext

PublicNext

04/05/2022 05:25 pm

Cinque Terre

34.55 K

Cinque Terre

1

ಸಂಬಂಧಿತ ಸುದ್ದಿ