ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಆ್ಯಸಿಡ್ ನಾಗ ಇಪ್ಪತ್ತು ದಿನ ಮೊದಲೇ ಪ್ಲ್ಯಾನ್ ಮಾಡಿರುವ ಅನುಮಾನ ವ್ಯಕ್ತವಾಗಿದೆ.
'ನಾನ್ ಒಂದ್ ಇಪ್ಪತ್ತು ದಿನ ಇರೋದಿಲ್ಲ. ಮನಃಶಾಂತಿಗಾಗಿ ಹೊರಗೆ ಹೋಗ್ತಿದ್ದೀನಿ' ಅಂತ ಗಾರ್ಮೆಂಟ್ಸ್ ಆಪ್ತ ಸ್ನೇಹಿತರ ಬಳಿ ಆರೋಪಿ ನಾಗೇಶ ಹೇಳಿಕೊಂಡಿದ್ದನಂತೆ.
ಎಲ್ಲಿಗೆ ಟ್ರಿಪ್ ಹೋಗ್ತಿದ್ದೀಯಪ್ಪ ಅಂತಾ ಸ್ನೇಹಿತರು ಕೇಳಿದ್ರೆ ಟಿವಿ ಪೇಪರ್‌ನಲ್ಲಿ ಬರುತ್ತೆ ನೋಡಿ ಅಂತ ಹೇಳಿದ್ನಂತೆ ಆಸಿಡ್ ನಾಗೇಶ. ಸದ್ಯ ಕಳೆದ ಒಂದು ತಿಂಗಳಿನಿಂದ ನಾಗ ಯಾರ ಯಾರ ಸಂಪರ್ಕ ಮಾಡಿದ್ನೋ ಎಲ್ಲರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲಿಗೆ 20 ದಿನ ಮೊದಲೇ ಆ್ಯಸಿಡ್ ಹಾಕಲು ಪ್ಲ್ಯಾನ್ ಮಾಡ್ಕೊಂಡಿದ್ದ ನಾಗೇಶ ಅನ್ನೊದು ಕನ್ಫರ್ಮ್ ಆಗಿದೆ.
ಈವರೆಗೆ ಪಕ್ಕಾ ಪ್ಲ್ಯಾನ್‌ನಂತೆ ಎಲ್ಲ ಕೆಲಸಗಳನ್ನ ಮಾಡಿ ಮುಗಿಸಿರೊ ಆರೋಪಿ ಕೈಯಲ್ಲಿ ಒಂದಷ್ಟು ಕ್ಯಾಶ್, ನೋ ಮೊಬೈಲ್, ನೋ ಆನ್‌ಲೈನ್ ನೋ ಟ್ರ್ಯಾನ್ಸಾಕ್ಷನ್, ನೋ ಫ್ಯಾಮಿಲಿ ಸೆಂಟಿಮೆಂಟ್, ನೋ ಫ್ರೆಂಡ್ಸ್ ಅಂತ ತಲೆ ಮರೆಸಿಕೊಂಡಿದ್ದಾನೆ.
ಶ್ರೀನಿವಾಸ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
03/05/2022 05:33 pm