ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಕೊಡಿಗೇಹಳ್ಳಿಯ ಮುಖ್ಯ ಪೊಲೀಸ್ ಕಾನ್ಸ್ ಟೇಬಲ್ ನೇಣಿಗೆ ಶರಣು

ಬೆಂಗಳೂರು : ಬೆಂಗಳೂರು ನಗರ ಈಶಾನ್ಯ ವಿಭಾಗದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ್ (45) ನೇಣಿಗೆ ಶರಣಾಗಿದ್ದಾನೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ವರ್ಷದಿಂದ ಕೆಲಸ ಮಾಡುತ್ತಿದ್ದ ಮಂಜುನಾಥ್ ಕಳೆದ ಒಂದೂವರೆ ತಿಂಗಳಿಂದ ಕೆಲಸಕ್ಕೆ ರಜೆ ಹಾಕಿದ್ದರು. ರಜೆ ಹಿನ್ನಲೆ ಬರುತ್ತಿದ್ದ ಸಂಬಳ ಸಹ ನಿಂತುಹೋಗಿತ್ತು. ನೆನ್ನೆ ಸಂಜೆ 4-30ರ ಸುಮಾರಿಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ T.B.ಕ್ರಾಸ್ ಬಳಿ ಮರಕ್ಕೆ ನೇಣುಬಿಗಿದುಕೊಂಡಿದ್ದಾನೆ.

ಯಲಹಂಕ ತಾಲೂಕು ಹೆಸರಘಟ್ಟ ಸಮೀಪದ ಬಿಳಿಜಾಜಿ ಮೂಲದವರಾದ ಮಂಜುನಾಥ್ ಹೆಂಡತಿ & ಇಬ್ಬರು ಮಕ್ಕಳನ್ನ ರಜೆಯ ನಿಮಿತ್ತ ತವರಿಗೆ ಕಳುಹಿಸಿದ್ದರಂತೆ. ಇತ್ತೀಚೆಗೆ ಒಂದು ಗುಂಟೆಗೆ 5ಲಕ್ಷದಂತೆ 11ಗುಂಟೆ ಜಮೀನನ್ನು ಮಾರಾಟ ಮಾಡಿದ್ದ ಮಂಜುನಾಥ್. ಹಣದ ವಿಚಾರವಾಗಿ, ಖರ್ಚುವೆಚ್ಚಗಳ ವಿಚಾರವಾಗಿ ಅಥವಾ ಕುಟುಂಬ ಕಲಹದ ವಿಚಾರವಾಗಿಯೋ ಒಟ್ಟಿನಲ್ಲಿ ನೇಣಿಗೆ ಶರಣಾಗಿದ್ದಾನೆ.

ಸದ್ಯ ಸಾವಿಗೆ ನಿಕರವಾದ ಕಾರಣ ಸ್ಪಷ್ಟವಾಗಿಲ್ಲ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

29/04/2022 02:26 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ