ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಳಿ ವಯಸ್ಸಿನಲ್ಲಿ ಪತ್ನಿ ಶೀಲ‌ ಶಂಕಿಸಿ ಕೊಲೆಗೈದ ಪತಿ.!

ಬೆಂಗಳೂರು: ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಆತನಿಗೆ ಆದಾಗ್ಲೆ ಇಳಿ ವಯಸ್ಸು. ಈ ವಯಸ್ಸಿನಲ್ಲಿ ಹೆಂಡ್ತಿ ಮೇಲೆ ಅನುಮಾನ, ಪ್ರತಿನಿತ್ಯ ಒಂದಿಲ್ಲೊಂದು ಕಿರಿಕ್ ಮಾಡ್ತಿದ್ರು ಕೂಡಾ ಹೊಂದಿಕೊಂಡು ಹೋಗ್ತಿದ್ದ ಹೆಂಡ್ತಿಯನ್ನ ರಾತ್ರೋ ರಾತ್ರಿ ಗಂಡನೇ ಕೊಲೆಗೈದ ಘಟನೆ ತಡರಾತ್ರಿ ತಲಘಟ್ಟಪುರ ಠಾಣಾ ವ್ಯಾಪ್ತಿಯ ನಾಗೇಗೌಡನಪಾಳ್ಯದಲ್ಲಿ ನಡೆದಿದೆ.

ಸಪದ್ಮಾ ಮೃತ ದುರ್ದೈವಿಯಾದ್ರೆ ಆಕೆಯನ್ನ ಕೊಂದು ಮುಗಿಸಿದ ಗಂಡ ಮಾರಪ್ಪ. ಆರೋಪಿಯನ್ನ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಡಿತದ ಚಟಕ್ಕೆ ಇದ್ದ ಆಸ್ತಿಯನ್ನೆಲ್ಲಾ ಕಳೆದುಕೊಂಡಿದ್ದ ಮಾರಪ್ಪನಿಗೆ ಕೊನೆಯದಾಗಿ ಸ್ವಂತ ಮನೆ ಮಾತ್ರ ಉಳಿದಿತ್ತು. ಕೆಲ ವರ್ಷಗಳ ಹಿಂದೆ ಅಪಘಾತವಾದ ಬಳಿಕ ಕೆಲಸ ಮಾಡದೇ ಮನೆಯಲ್ಲೇ ಇರುತ್ತಿದ್ದ ಮಾರಪ್ಪ ಸದಾ ಕುಡ್ಕೊಂಡು ಮನೆಯವರ ಜೊತೆ ಜಗಳ ಮಾಡ್ತಲೇ ಇರ್ತಿದ್ದ. ಪತ್ನಿ ಪದ್ಮಾ ಖಾಸಗಿ ಶಾಲೆಯೊಂದರಲ್ಲಿ ಆಯಾ ಕೆಲಸ ಮಾಡ್ತಿದ್ರೆ, ಗಂಡು ಮಕ್ಕಳಿಬ್ಬರು ಅಪ್ಪನ ಬೇಜವಾಬ್ದಾರಿ ಸಹಿಸದೇ ತಾವೇ ಕೆಲಸಕ್ಕೆ ಹೋಗ್ತಿದ್ರು. ಎಂದಿನಂತೆ ನಿನ್ನೆ ರಾತ್ರಿ‌ ಕೂಡಾ ಎಣ್ಣೆ ಅಮಲಿನಲ್ಲಿ ಪತ್ನಿಯೊಂದಿಗೆ ಕಿರಿಕ್ ತೆಗೆದಿದ್ದ ಮಾರಪ್ಪ ಹಿಟ್ಟು ತಿರುವುವ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದಿದ್ದ. ಅಷ್ಟೇ, ಒಂದೇ ಏಟಿಗೆ ಪದ್ಮಾ ಉಸಿರು ಚೆಲ್ಲಿದ್ಳು. ಸದ್ಯ ಮಾರಪ್ಪನನ್ನ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದು ಕಂಬಿ ಹಿಂದೆ ಕಳಿಸಿದ್ದಾರೆ.

Edited By : Nagesh Gaonkar
PublicNext

PublicNext

23/04/2022 10:54 pm

Cinque Terre

55.55 K

Cinque Terre

0

ಸಂಬಂಧಿತ ಸುದ್ದಿ