ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಾಲು, ಪೇಪರ್ ನೆಪದಲ್ಲಿ ಅಪಾರ್ಟ್ಮೆಂಟ್‌ಗೆ ಎಂಟ್ರಿ, ಇಡೀ ರಾತ್ರಿ ಕದ್ದು ಬೆಳಿಗ್ಗೆ ಎಸ್ಕೇಪ್

ಬೆಂಗಳೂರು: ನೀವೂ ಅಪಾರ್ಟ್ಮೆಂಟ್‌ನಲ್ಲಿ ಇದ್ದೀರಾ. ನಿಮ್ಮ ಅಪಾರ್ಟ್ಮೆಂಟ್‌ಗೆ ಸೆಕ್ಯುರಿಟಿ ಇದೆ ನಾವ್ ಸೇಫ್ ಅಂದುಕೊಂಡಿದ್ರೆ ಈ ಸ್ಟೋರಿ ನೋಡಿ.

ಇವನು ಕಳ್ಳತನ ಮಾಡುವ ಹಾದಿಯೇ ಡಿಫರೆಂಟ್. ನೈಟ್ ಟೈಂ ಅಪಾರ್ಟ್ಮೆಂಟ್‌ಗೆ ಎಂಟ್ರಿ ಕೊಟ್ರೆ ಸಿಸಿಟಿವಿಯಲ್ಲಿ ಗೊತ್ತಾಗಿ ಬಿಡುತ್ತೆ ಅಂತ ಇವನು ಹಾಲು, ಪೇಪರ್ ಹಾಕೋರು ಗೇಟ್ ಎಂಟ್ರಿ ಆಗೋ ಟೈಂ‌ನಲ್ಲೇ ಬಂದು ಅಪಾರ್ಟ್ಮೆಂಟ್‌ಗೆ ಬಂದು ಟೆರಸ್ ಸೇರ್ಕೋತಿದ್ದ.‌ ರಾತ್ರಿ ಹೊತ್ತು ಪ್ಲಾಟ್ ನಲ್ಲಿ ಕಳ್ಳತನ ಮಾಡಿ ಮತ್ತೆ ಬೆಳಗಾಗುವಷ್ಟರಲ್ಲಿ ಟೆರೇಸ್ ಸೇರ್ಕೋತ್ತಿದ್ದ. ಬೆಳಿಗ್ಗೆ ಮತ್ತೆ ಹಾಲು, ಪೇಪರ್ ಹುಡುಗರ ಜೊತೆ ವಾಪಸ್ ಬರ್ತಿದ್ದ.

ತಮಿಳುನಾಡು ಮೂಲದ ಇಸಯ್ ರಾಜ್ ಬಂಧಿತ ಕಳ್ಳ‌ನಾಗಿದ್ದು ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿದ್ದ. ಡ್ರಗ್ಸ್ ಚಟಕ್ಕೆ ಬಿದ್ದಿದ್ದ ಈತನ ವಿರುದ್ಧ ಸಂಪಿಗೆಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್‌ಗೆ ಸೇರಿಸಿದ್ದರು. ಕೈಯಲ್ಲಿ ಕಾಸಿಲ್ಲದೆ ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ ಇಸಯ್ ರಾಜ್‌ಗೆ ಹೊಳೆದಿದ್ದು ಕಳ್ಳತನ ದಾರಿ.

ಹಣಕ್ಕಾಗಿ ಕಳ್ಳತನ ಮಾಡಲು ಪ್ಲ್ಯಾನ್ ರೂಪಿಸಿಕೊಂಡು ಅಪಾರ್ಟ್‌ಮೆಂಟ್‌ಗಳನ್ನೇ ಗುರಿಯಾಗಿಸಿಕೊಂಡಿದ್ದ. ಪ್ಲಂಬರ್, ಎಲೆಕ್ಟ್ರಿಕಲ್ ಸೋಗಿನಲ್ಲಿ ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ‌ ಉಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ. ಕಳ್ಳತನ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ ಅನುಮಾನ ಬರುವುದಾಗಿ ಭಾವಿಸಿ ಆ ರಾತ್ರಿ ಟೇರೆಸ್‌ನಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರು ಬರುವುದನ್ನ ಕಂಡು ಅವ್ರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದ. ಅದೇ ರೀತಿ ಕಳೆದ ಮಾರ್ಚ್‌ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಬಾಲರಾಜ್, ಸೆರೆಯಾಗಿದ್ದ ಸಿಸಿಟಿವಿ ದೃಶ್ಯ ಸೇರಿದಂತೆ ತಾಂತ್ರಿಕವಾಗಿ ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Shivu K
PublicNext

PublicNext

22/04/2022 10:37 pm

Cinque Terre

61.06 K

Cinque Terre

3

ಸಂಬಂಧಿತ ಸುದ್ದಿ