ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲಿ ನಡೆಯುತ್ತಿದೆಯಂತೆ 40 ಪರ್ಸೆಂಟ್ ದಂಧೆ ನಡೆಯುತ್ತಿದೆ ಎಂದು KS&DL ಕಾರ್ಮಿಕರ ಯೂನಿಯನ್ ಗಂಭೀರ ಆರೋಪ ಮಾಡಿದೆ . ಶ್ರೀಗಂಧ ಎಣ್ಣೆ ಖರೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದಲ್ಲೂ ಗೋಲ್ ಮಾಲ್ ಆಗಿದೆ ಎಂದು ಮಾಧ್ಯಮಗಳ ಮುಂದೆ KS&DL ಕಾರ್ಮಿಕರ ಯೂನಿಯನ್ ರಾಜ್ಯಾಧ್ಯಕ್ಷ ವೆಂಕಟೇಶ್ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. KS&DL ಎಂಡಿ ಮಹೇಶ್ ಶಿರೂರ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದ್ದಾರೆ.
ಎರಡು ವರ್ಷಗಳಿಂದ MD ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರದಲ್ಲಿ ಶ್ರೀಗಂಧ ಎಣ್ಣೆ ಮಾರಾಟ ಮಾಡಿದ್ದಾರೆ ಎಂದಿದ್ದಾರೆ.
ಬ್ಲಾಕ್ ಲಿಸ್ಟ್ನಲ್ಲಿರುವ ಕಂಪನಿಗಳ ಜೊತೆಗೂ ಶಿರೂರ ವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ೧ ಕೆಜಿ ಶ್ರೀಗಂಧಕ್ಕೆ ೧ ಲಕ್ಷ ಹಣ ಹೆಚ್ಚುವರಿ ಕೊಟ್ಟು ೨ ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. KS&DL ಕಾರ್ಮಿಕರ ಯೂನಿಯನ್ ಇಲ್ಲಿ ನಡೆದಿರುವಂತಹ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವನ್ನು ACB ಗೆ ವಹಿಸಲು ಆಗ್ರಹ ಮಾಡಿದ್ದಾರೆ.
-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
22/04/2022 06:46 pm