ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬರ್ತ್ ಡೇ ದಿನವೇ ಬಾಲಕನನ್ನು ಬಲಿ ಪಡೆದ ವಿಧಿ.!

ಯಲಹಂಕ: ಆವಲಹಳ್ಳಿಯ ಯಕ್ಷಿತ್ ಎಂಬ ಬಾಲಕ ನಿನ್ನೆ ಅಂದರೆ (ಎ.18)ರಂದು ಮೂರು ವಸಂತ ಪೂರೈಸಿ ನಾಲ್ಕನೇ ವರ್ಷದ ಬರ್ತ್ ಡೇ ಸಂಭ್ರಮದಲ್ಲಿದ್ದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಭಾರಿ ಬಿರುಗಾಳಿ ಮತ್ತು ಗುಡುಗುಸಹಿತ ಭಾರಿ ಮಳೆಗೆ ಆವಲಹಳ್ಳಿ ಸಾಯಿಬಾಬಾ ದೇವಸ್ಥಾನದ ಬಳಿ ಇಟ್ಟಿದ್ದ ಶೋಫೋಲ್ ಕಂಬ ಮಗಿವಿನ ಮೇಲೆ ಬಿದ್ದಿದ್ದು, ಬಾಲಕ ಗಾಯಗೊಂಡಿದ್ದ. ಕೂಡಲೇ ಗ್ರಾಮಸ್ಥರು ಮತ್ತು ಸ್ಥಳೀಯರು ಹೆಬ್ವಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದಾರೆ. ಬ್ಯಾಪ್ಟಿಸ್ಟ್ ನಲ್ಲಿ ಫಸ್ಟ್ ಏಡ್ ಮಾಡಿದ ನಂರತವೂ ಚಿಕಿತ್ಸೆ ಮುಂದುವರೆದಿತ್ತು.

ದುರದೃಷ್ಟವಶಾತ್ ನಾಲ್ಕು ವರ್ಷದ ಯಕ್ಷಿತ್ ಸಾವು ಬದುಕಿನ ನಡುವೆ ಹೋರಾಡಿ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಯಕ್ಷಿತ್ ದುರಂತ ಅಂತ್ಯ ಹಿನ್ನಲೆ ರಾಜಾನುಕುಂಟೆ ಪೊಲೀಸರು ಸ್ಥಳ, ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಏನೇ ಆಗಲಿ ಮಗುವನ್ನು ದೇವಸ್ಥಾನದ ಶೋಫೋಲ್ ಕಂಬ ಬಲಿಪಡೆದಿರುವುದು ದುರಂತವೇ ಸರಿ.

Edited By : Vijay Kumar
Kshetra Samachara

Kshetra Samachara

19/04/2022 05:20 pm

Cinque Terre

3.85 K

Cinque Terre

0

ಸಂಬಂಧಿತ ಸುದ್ದಿ