ಬೆಂಗಳೂರು : ನಮ್ಮ ಮೆಟ್ರೋದಲ್ಲಿ 10 ವರ್ಷದಲ್ಲಿ ಪ್ರಯಾಣಿಕರಿಗೆ ತೊಂದರೆ ಮಾಡಿದ ಅಥವಾ ನಮ್ಮ ಮೆಟ್ರೋ ನಿಯಮ ಉಲ್ಲಂಘಿಸಿದ 1852 ಪ್ರಯಾಣಿಕರಿಂದ 4.18 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕುಡುಕರು ಹಾಗೂ ದುರ್ವರ್ತನೆ ಪ್ರಕರಣಗಳು ಹೆಚ್ಚಾಗಿದೆ. ಉಳಿದಂತೆ ಅತಿಕ್ರಮ ಪ್ರವೇಶ ಮೆಟ್ರೋ ಅಲಾರಾಮ್ ದುರ್ಬಳಕೆ ಘಟನೆಗಳು ನಡೆದಿವೆ.
ಇಂತಹ ಪ್ರಕರಣಗಳಲ್ಲಿ ಕುಡುಕರ ಪಾಲೇ ಹೆಚ್ಚಾಗಿದ್ದು, 1712 ರಿಂದ 3.35 ಲಕ್ಷ ರೂ ದಂಡ ವಸೂಲಿ ಆಗಿದೆ. ವಾರಾಂತ್ಯದಲ್ಲಿ ಇಂತಹ ಪ್ರಕರಣ ಅತಿಯಾಗಿದ್ದು, ಎಂ.ಜಿ.ರಸ್ತೆ, ಇಂದಿರಾ ನಗರದಲ್ಲಿ ಅಧಿಕ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
18/04/2022 08:44 pm